alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಇದು..!

Bangalore city scape shot with full frame Nikon d750

ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಸಾರ್ವಜನಿಕ ಸೇವೆಗಾಗಿ ಲಂಚ ನೀಡುವುದರಲ್ಲಿ ಜನರ ಅನುಭವವನ್ನು ಪರಿಗಣಿಸಿದ್ರೆ ಭ್ರಷ್ಟರಾಜ್ಯಗಳ ಪೈಕಿ ಮೊದಲ ಸ್ಥಾನ ಕರ್ನಾಟಕಕ್ಕೆ ಲಭಿಸಿದೆ. ಎನ್ ಜಿ ಓ ನಡೆಸಿದ ಸಮೀಕ್ಷೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಜಮ್ಮು & ಕಾಶ್ಮೀರ ಮತ್ತು ಪಂಜಾಬ್ ನಂತರದ ಸ್ಥಾನದಲ್ಲಿವೆ.

‘ಸೆಂಟರ್ ಆಫ್ ಮೀಡಿಯಾ ಸ್ಟಡೀಸ್’ ಎಂಬ ಹೆಸರಿನಲ್ಲಿ 20 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಭ್ರಷ್ಟಾಚಾರದ ಪ್ರಮಾಣ ಅತ್ಯಂತ ಕಡಿಮೆ ಇರುವ ರಾಜ್ಯಗಳೆಂದ್ರೆ ಹಿಮಾಚಲ ಪ್ರದೇಶ, ಕೇರಳ ಮತ್ತು ಛತ್ತೀಸ್ ಗಢ. ಕರ್ನಾಟಕದಲ್ಲಿ 1/3ರಷ್ಟು ಮನೆಗಳಲ್ಲಿ ಪ್ರತಿಯೊಬ್ಬರೂ ವರ್ಷಕ್ಕೆ ಒಮ್ಮೆಯಾದ್ರೂ ಲಂಚ ಕೊಡುತ್ತಾರೆ. 2005ರಲ್ಲೂ ಈ ಪ್ರಮಾಣ ಶೇ.53ರಷ್ಟಿತ್ತು.

ಹಳ್ಳಿ ಮತ್ತು ನಗರಪ್ರದೇಶದ 3000ಕ್ಕೂ ಅಧಿಕ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜನರೇ ಹೇಳುವಂತೆ 2016ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನೋಟು ನಿಷೇಧ ಮಾಡಿದಾಗ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಿತ್ತು. 2017ರಲ್ಲಿ 20 ರಾಜ್ಯಗಳಲ್ಲಿ ಜನರು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಿರುವ ಲಂಚದ ಹಣ ಎಷ್ಟು ಗೊತ್ತಾ? ಬರೋಬ್ಬರಿ 6,350 ಕೋಟಿ ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...