alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಡಳಿ ರಚನೆಯಾದ್ರೆ ಕರ್ನಾಟಕದ ಕೈ ತಪ್ಪುತ್ತೆ ಕಾವೇರಿ

mysore-cauvery

ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ.

ಪ್ರತಿ ವಿಚಾರಣೆಯಲ್ಲೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸುವ ಮೂಲಕ ರಾಜ್ಯದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದಿನ ವಿಚಾರಣೆಯಲ್ಲಿ 4 ವಾರದೊಳಗೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಈಗ ಅಕ್ಟೋಬರ್ 4 ರೊಳಗೆ ಮಂಡಳಿ ರಚಿಸಬೇಕೆಂದು ಆದೇಶ ನೀಡಿದೆ.

ತೀರ್ಪಿನ ಕುರಿತಾಗಿ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದಲ್ಲಿ ಕಾವೇರಿ ನದಿ ಮೇಲಿನ ಹಕ್ಕನ್ನು ಕರ್ನಾಟಕ ಕಳೆದುಕೊಳ್ಳಲಿದೆ. ಕೇಂದ್ರ ಸರ್ಕಾರದ ಸುಪರ್ದಿಗೆ ಕಾವೇರಿ ನದಿ ಮೇಲಿನ ಹಕ್ಕು ಹೋಗಲಿದೆ.

ಕೇಂದ್ರದ ಜಲಸಂಪನ್ಮೂಲ ಇಲಾಖೆ ಕಾವೇರಿ ಕೊಳ್ಳದ ಮೇಲಿನ ಜಲಾಶಯಗಳ ಹಕ್ಕು ಹೊಂದಲಿದ್ದು, ನೀರು ನಿರ್ವಹಣಾ ಮಂಡಳಿಯೇ ನೀರು ಹರಿಸುವ ತೀರ್ಮಾನ ಕೈಗೊಳ್ಳಲಿದೆ. ಮಂಡಳಿಗೆ ಕೇಂದ್ರದಿಂದ ಸದಸ್ಯರನ್ನು ನೇಮಿಸಲಾಗುತ್ತದೆ.

ಕರ್ನಾಟಕ ಮತ್ತು ತಮಿಳುನಾಡಿನ ಸದಸ್ಯರು ಇದ್ದರೂ, ಎಂದಿನಂತೆಯೇ ತಮಿಳುನಾಡು ಒತ್ತಡದ ಮೂಲಕ ಮೇಲುಗೈ ಸಾಧಿಸಲಿದೆ. ಅಲ್ಲಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಾಜ್ಯದ ಪಾಲಿಗೆ ಮರಣಶಾಸನ ಇದ್ದಂತೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...