alex Certify
ಕನ್ನಡ ದುನಿಯಾ       Mobile App
       

Kannada Duniya

ಬಿರು ಬಿಸಿಲಿಗೆ ಶಿವಮೊಗ್ಗ ಜಿಲ್ಲೆಯ ಜನ ತತ್ತರ

ಶಿವಮೊಗ್ಗ : ಜಿಲ್ಲೆಯಲ್ಲಿ ಬಿಸಿಲಿನ ಝಳ ಏರತೊಡಗಿದ್ದು, ಬಳ್ಳಾರಿ ಬಿಸಿಲನ್ನು ನಾಚಿಸುವಂತಹ ಧಗೆ ಕಂಡುಬರುತ್ತಿದೆ. ಬಿಸಿಲ ಹೊಡೆತಕ್ಕೆ ಜನ ತತ್ತರಿಸಿಹೋಗಿದ್ದಾರೆ.

ಮಲೆನಾಡು ಪ್ರದೇಶವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದೆ ತಂಪಾದ ವಾತಾವರಣ ಇತ್ತು. ಕಳೆದ ಐದಾರು ವರ್ಷಗಳಿಂದೀಚೆಗೆ ಬಳ್ಳಾರಿ, ರಾಯಚೂರು ಬಿಸಿಲಿಗೆ ಪೈಪೋಟಿ ನೀಡುವಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ.

ಮರ ಕಡಿತಲೆ, ಕೆರೆ ಒತ್ತುವರಿ ಮೊದಲಾದ ಕಾರಣಗಳಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ತಾಪಮಾನದಲ್ಲಿ ಏರಿಕೆಯಾಗಿದೆ. ಬೆಳಿಗ್ಗೆಯೇ ಮೈಸುಡುವಂತಹ ಬಿಸಿಲು ಕಂಡುಬರುತ್ತಿದೆ. ಕಟ್ಟಡ ಕಾರ್ಮಿಕರು, ಬಿಸಿಲಿನಲ್ಲಿ ಕೆಲಸ ಮಾಡುವವರ ಪಾಡಂತೂ ಹೇಳತೀರದಾಗಿದೆ.

ಬಿಸಿಲಿನ ತಾಪದಿಂದ ಜನ ಮನೆಯಿಂದ ಹೊರಗೆ ಬರುವುದೇ ಕಡಿಮೆಯಾಗಿದೆ. ಜನ ಎಳನೀರು, ತಂಪು ಪಾನೀಯ, ಮಜ್ಜಿಗೆ, ಕಲ್ಲಂಗಡಿ ಹಣ್ಣು ಸೇರಿದಂತೆ ಹಣ್ಣು ಹಂಪಲುಗಳ ಮೊರೆ ಹೋಗಿದ್ದಾರೆ.

ಬಿಸಿಲಿನ ಧಗೆಗೆ ಪ್ರಾಣಿ ಪಕ್ಷಿಗಳು ಕೂಡ ಹೈರಾಣಾಗಿವೆ. ಹಗಲಿನಲ್ಲಿ ಮಾತ್ರವಲ್ಲ ರಾತ್ರಿಯೂ ಕೂಡ ಸೆಕೆ ತಾಳದೇ ಜನ ಬಸವಳಿದಿದ್ದಾರೆ. ರಾತ್ರಿ ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಫ್ಯಾನ್, ಎಸಿ ಇಲ್ಲದೇ ಒದ್ದಾಡುವ ಪರಿಸ್ಥಿತಿ ಇದೆ. ಇನ್ನು ಬಿಸಿಲಿನೊಂದಿಗೆ ಕೆಲವೆಡೆ ಸೊಳ್ಳೆ ಕಾಟ ಕೂಡ ಹೆಚ್ಚಾಗಿದ್ದು, ಒಂದೆರಡು ಬಾರಿ ಮಳೆಯಾದಲ್ಲಿ ವಾತಾವರಣ ತಂಪಾಗಬಹುದೆಂಬ ನಿರೀಕ್ಷೆ ಜನರಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...