alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿಯಡಿ ಸಿಲುಕಿ ಕಾಲು ಕಳೆದುಕೊಂಡಿದ್ದ ಹುಸೇನ್ ಸಾಬ್ ಸಾವು

ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಟಿಪ್ಪರ್ ಲಾರಿ ಚಕ್ರದಡಿ ಬಿದ್ದಿದ್ದ, ಕೊಪ್ಪಳ ಜಿಲ್ಲೆ ಕುಕನೂರಿನ ಹುಸೇನ್ ಸಾಬ್ ಸಾವನ್ನಪ್ಪಿದ್ದಾನೆ.

ಕಲಹದ ಬಳಿಕ ತನ್ನ ಮನೆಯಿಂದ ಹೊರ ಬಂದಿದ್ದ ಹುಸೇನ್ ಸಾಬ್ ಕುಕನೂರಿನ ಪ್ರವಾಸಿ ಮಂದಿರದ ಬಳಿ ಟಿಪ್ಪರ್ ಲಾರಿ ಚಕ್ರದ ಮುಂದೆ ಬಿದ್ದಿದ್ದ. ಇದರಿಂದಾಗಿ ಆತನ ಎರಡೂ ಕಾಲುಗಳು ತುಂಡರಿಸಿ ಹೋಗಿದ್ದವು.

ಹುಸೇನ್ ಸಾಬ್ ನರಳಾಡುತ್ತಾ ಬಿದ್ದಿದ್ದರೂ ಆತನನ್ನು ಆಸ್ಪತ್ರೆಗೆ ದಾಖಲಿಸುವ ಗೋಜಿಗೆ ಹೋಗದ ಸ್ಥಳೀಯರು, ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದರು.

ಅರ್ಧ ಗಂಟೆ ಬಳಿಕ ಸ್ಥಳಕ್ಕಾಗಮಿಸಿದ 108 ಸಿಬ್ಬಂದಿ ಹುಸೇನ್ ಸಾಬ್ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...