alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧದಲ್ಲಿದ್ದ ಜೋಡಿ ದುಡುಕಿದ್ದೇಕೆ..?

ಮೈಸೂರು: ಪತಿ, ಪತ್ನಿಯನ್ನು ಬಿಟ್ಟು ಬಂದು ಜೊತೆಯಾಗಿಯೇ ವಾಸಿಸುತ್ತಿದ್ದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಚ್.ಡಿ. ಕೋಟೆ ತಾಲ್ಲೂಕಿನ ಮಾದಾಪುರದಲ್ಲಿ ನಡೆದಿದೆ.

35 ವರ್ಷದ ಮಹಿಳೆ, 31 ವರ್ಷದ ವ್ಯಕ್ತಿ ಮಾದಾಪುರದಲ್ಲಿ ಒಟ್ಟಿಗೆ ವಾಸವಾಗಿದ್ದು, ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದ ವ್ಯಕ್ತಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವ್ಯಕ್ತಿ ಪತ್ನಿಯನ್ನು ತೊರೆದಿದ್ದು, ಮಹಿಳೆ ಪತಿಯಿಂದ ದೂರವಾಗಿದ್ದಳು. ಇಬ್ಬರೂ 2 ವರ್ಷದಿಂದ ಮಾದಾಪುರದಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು. ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಮನನೊಂದ ವ್ಯಕ್ತಿಯೂ ನೇಣು ಹಾಕಿಕೊಂಡಿದ್ದಾರೆ. ಹೆಚ್.ಡಿ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...