alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲು ನೋವೆಂದು ಆತ್ಮಹತ್ಯೆಗೆ ಶರಣಾದ ಮಹಿಳೆ…?

ಪಿರಿಯಾಪಟ್ಟಣ: ಹಲ್ಲು ನೋವಿನಿಂದ ಹೈರಾಣಾದ ಮಹಿಳೆಯೊಬ್ಬರು ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

24 ವರ್ಷದ ರಮ್ಯಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಅರಕಲಗೂಡು ತಾಲೂಕಿನ ಕಡನೂರು ಗ್ರಾಮದ ನಿವಾಸಿಯಾದ ರಮ್ಯಾ ಹಲವು ವರ್ಷಗಳಿಂದ ಹಲ್ಲು ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ನೋವು ತಡೆಯಲಾಗದೇ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಮ್ಯಾ ತಂದೆ ತಿಳಿಸಿದ್ದಾರೆ.

ಆದರೆ 4 ವರ್ಷಗಳ ಹಿಂದೆಯೇ ಅರಕಲಗೂಡು ತಾಲೂಕಿನ ಕಡನೂರು ಗ್ರಾಮದ ಹರೀಶ್‌ ಎಂಬಾತನನ್ನು ವಿವಾಹವಾಗಿದ್ದ ರಮ್ಯಾ ದಂಪತಿಗೆ ಮಕ್ಕಳಿರಲಿಲ್ಲ ಎಂದು ತಿಳಿದುಬಂದಿದೆ. ರಮ್ಯಾ ಆತ್ಮಹತ್ಯೆಗೆ ಸಮರ್ಪಕವಾದ ಕಾರಣ ತಿಳಿದು ಬಂದಿಲ್ಲವಾದರೂ ರಮ್ಯಾ ಹಲ್ಲು ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ನಾಗರಾಜು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೆಟ್ಟದಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...