alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗೆ ಗೊತ್ತಾಗದಂತೆ ಪ್ರಣಯದಾಟ, ನಂತರ ನಡೀತು ದುರಂತ

ಬೆಂಗಳೂರು: ಬೆಂಗಳೂರಿನಲ್ಲಿ ಸಂಘಟನೆಯೊಂದರ ಅಧ್ಯಕ್ಷೆ ಹಾಗೂ ಪದಾಧಿಕಾರಿಯ ಪ್ರಣಯದಾಟ ಪತಿಗೆ ಗೊತ್ತಾಗಿ ದುರಂತ ಅಂತ್ಯ ಕಂಡಿದೆ.

ಸಂಘಟನೆಯ ಅಧ್ಯಕ್ಷೆ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಾದ ಮರುದಿನ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರ(ಪದಾಧಿಕಾರಿ) ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಧ್ಯಕ್ಷೆ ಹಾಗೂ ಪದಾಧಿಕಾರಿ ನಡುವೆ ಅನೈತಿಕ ಸಂಬಂಧವಿದ್ದು, ಇಬ್ಬರೂ ಖಾಸಗಿಯಾಗಿದ್ದ ಸಂದರ್ಭದಲ್ಲಿ ಪ್ರಿಯಕರ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ವಿಡಿಯೋ ಬಹಿರಂಗಪಡಿಸುವುದಾಗಿ ಅಧ್ಯಕ್ಷೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಕರೆದಾಗ ಬರುವಂತೆ ಬೆದರಿಸಿದ್ದಾನೆ.

ಈ ವಿಚಾರ ಅಧ್ಯಕ್ಷೆಯ ಪತಿಗೆ ಗೊತ್ತಾದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಬೆದರಿದ ಪದಾಧಿಕಾರಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೂ ಮೊದಲು ಪತಿಯ ಕಿರುಕುಳದಿಂದಲೇ ಅಧ್ಯಕ್ಷೆ ಸಾವನ್ನಪ್ಪಿದ್ದಾರೆ ಎನ್ನುವಂತೆ ಬಿಂಬಿಸಲು ನಕಲಿ ಡೆತ್ ನೋಟ್ ಸೃಷ್ಠಿಸಿದ್ದಾನೆ. ಫೇಸ್ ಬುಕ್ ಲೈವ್ ಗೆ ಬಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...