alex Certify
ಕನ್ನಡ ದುನಿಯಾ       Mobile App
       

Kannada Duniya

4 ನೇ ಮಹಡಿಯಿಂದ ಹಾರಲೆತ್ನಿಸಿದ ಯುವಕ

representational image 2

ಬೆಂಗಳೂರು: ಸಹೋದರನೊಂದಿಗೆ ಜಗಳವಾಡಿಕೊಂಡ ಯುವಕನೊಬ್ಬ ಕೋಪದ ಭರದಲ್ಲಿ 4 ನೇ ಮಹಡಿಯಿಂದ ಹಾರುವುದಾಗಿ ಬೆದರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅತ್ತಿಬೆಲೆ ನಿವಾಸಿ 23 ವರ್ಷದ ವಿನಯ್ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಈತ ಕಳೆದ 5 ದಿನಗಳಿಂದ ಮಲ್ಲೇಶ್ವರಂ ನ ಮಾರ್ಗೋಸಾ ರಸ್ತೆಯಲ್ಲಿರುವ ನ್ಯೂರೋ ಸೈನ್ಸ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆಂದು ಹೇಳಲಾಗಿದೆ.

ಇಂದು ತನ್ನನ್ನು ನೋಡಲು ಬಂದ ಸಹೋದರನ ಬಳಿ ವಿನಯ್, ಡಿಸ್ಚಾರ್ಜ್ ಮಾಡಿಸಿಕೊಂಡು ಕರೆದುಕೊಂಡು ಹೋಗುವಂತೆ ಕೇಳಿದನೆನ್ನಲಾಗಿದ್ದು, ಇನ್ನೂ ಸ್ವಲ್ಪ ದಿನ ಚಿಕಿತ್ಸೆ ಪಡೆಯುವಂತೆ ಸಹೋದರ ಹೇಳಿದ ವೇಳೆ ಸಿಟ್ಟಿಗೆದ್ದು, ಕಿಟಕಿಯಿಂದ ಹೊರ ಹಾರಲು ಯತ್ನಿಸಿದನೆಂದು ತಿಳಿದುಬಂದಿದೆ. ಈ ವೇಳೆ ಸ್ಥಳೀಯರು ಆತನನ್ನು ರಕ್ಷಿಸಿದ್ದು, ವಿನಯ್ ನನ್ನು ಈಗ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...