alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ ನಿರ್ಮಾಪಕ

SHASHIKUMAR

ಸಾಲ ಬಾಧೆಯಿಂದ ನೊಂದ ‘ಹಾಫ್ ಮೆಂಟ್ಲು’ ಚಿತ್ರದ ನಿರ್ಮಾಪಕ ಶಶಿಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ.

ನಟ ಸುದೀಪ್ ಅವರ ಅಭಿಮಾನಿಯೂ ಆಗಿರುವ ನಿರ್ಮಾಪಕ ಶಶಿಕುಮಾರ್ ಸುಮಾರು 3.25 ಕೋಟಿ ರೂಪಾಯಿ ಸಾಲ ಮಾಡಿ ‘ಹಾಫ್ ಮೆಂಟ್ಲು’ ಸಿನಿಮಾ ನಿರ್ಮಿಸಿದ್ದರು. ಆದರೆ ದುರದೃಷ್ಟವಶಾತ್ ಕಳೆದ ಒಂದೂವರೆ ವರ್ಷದಿಂದ ಸಿನಿಮಾ ಬಿಡುಗಡೆ ಮಾಡಲು ಡಿಸ್ಟ್ರಿಬ್ಯೂಟರ್ ಸಿಕ್ಕಿರಲಿಲ್ಲ.

ಇದರಿಂದ ಮನನೊಂದಿದ್ದ ಶಶಿಕುಮಾರ್ ಸಾಲಗಾರರ ಒತ್ತಡದಿಂದ ಹತಾಶರಾಗಿದ್ದರಲ್ಲದೇ ಚಿತ್ರ ಬಿಡುಗಡೆಗೂ ಸುಮಾರು 70 ರಿಂದ 80 ಲಕ್ಷ ರೂಪಾಯಿ ಅವಶ್ಯಕತೆಯನ್ನು ಭರಿಸಲಾಗದ ನೋವಿನಿಂದ ಕಾಮಾಕ್ಷಿಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.

ಈ ನಡುವೆ ಆಸ್ಪತ್ರೆಯಲ್ಲಿ ಮಾತನಾಡಿರುವ ಶಶಿ ಕುಮಾರ್, ತಾವು ಸುದೀಪ್ ಅವರ ಅಭಿಮಾನಿಯಾಗಿದ್ದು ನನ್ನ ಸಿನಿಮಾ ಬಿಡುಗಡೆಗೆ ಅವರೇ ಸಹಾಯ ಮಾಡಬೇಕು. ನನ್ನ ಸಾವಿನಿಂದಾದರೂ ‘ಹಾಫ್ ಮೆಂಟ್ಲು’ ಚಿತ್ರ ಬಿಡುಗಡೆಯಾಗಬಹುದೆಂಬ ಆಸೆ ನನ್ನದು ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...