alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆಯೆಂಬ ಮಾಹಿತಿ ಇದ್ದರೂ ಮತ್ತೊಬ್ಬನೊಂದಿಗೆ ಮದುವೆ ಮಾಡಿಸಿದ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ವಿವಾಹಿತೆಯಾಗಿದ್ದ ಮಹಿಳೆಗೆ ಮತ್ತೊಬ್ಬನೊಂದಿಗೆ ಮದುವೆ ನೆರವೇರಿಸಿ ಯಡವಟ್ಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈಗ ಮಹಿಳೆಯ ಮೊದಲ ಪತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಯಲ್ಲಾಪುರದ ಗಣಪತಿ ಭಟ್ ಎಂಬಾತನನ್ನು ಪ್ರೀತಿಸುತ್ತಿದ್ದ ಈ ಯುವತಿ, 9 ತಿಂಗಳ ಹಿಂದೆ ಕುಟುಂಬಸ್ಥರ ವಿರೋಧದ ನಡುವೆಯೂ ಯಲ್ಲಾಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆತನೊಂದಿಗೆ ವಿವಾಹವಾಗಿದ್ದಳೆಂದು ತಿಳಿದು ಬಂದಿದೆ.

ಇದಾದ ಬಳಿಕ ಕೆಲ ದಿನಗಳ ಹಿಂದೆ ಯುವತಿಯ ಪೋಷಕರು, ನಿಮ್ಮಿಬ್ಬರ ಮದುವೆಗೆ ನಮ್ಮ ಒಪ್ಪಿಗೆ ಇದೆ ಎಂದು ಹೇಳಿ ಪುಸಲಾಯಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ಆಕೆಯ ಮನವೊಲಿಸಿ ಕಾರವಾರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಾಜೇಶ್ ಎಂಬ ಯುವಕನೊಂದಿಗೆ ವಿವಾಹ ನೆರವೇರಿಸಿದ್ದಾರೆಂದು ಹೇಳಲಾಗಿದೆ.

ಕಾರವಾರದ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳಿಗೆ ಯಲ್ಲಾಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿದ್ದ ಮೊದಲ ವಿವಾಹದ ಮಾಹಿತಿ ಇದ್ದರೂ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗಿದ್ದು, ಇದೀಗ ಮೊದಲ ಪತಿ ಪೊಲೀಸರ ಮೊರೆ ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...