alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಿಂದ ಇಳಿದು ಬಂದು ಶಾಲಾ ಮಕ್ಕಳ ಸಮಸ್ಯೆ ಆಲಿಸಿದ ಸಿಎಂ

ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದಕ್ಕೆ ತೆರಳುವ ವೇಳೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಕಂಡು ಕಾರಿನಿಂದ ಇಳಿದು ಬಂದು ಅವರ ಸಮಸ್ಯೆ ಆಲಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಸೋಮವಾರದಂದು ಮತ್ತೊಮ್ಮೆ ಶಾಲಾ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆಯ ಸ್ಥಳಾಂತರವನ್ನು ವಿರೋಧಿಸಿ ಚಿತ್ರದುರ್ಗ ತಾಲೂಕಿನ ಆಲಘಟ್ಟದ ವಿದ್ಯಾರ್ಥಿಗಳು ಮತ್ತು ಪೋಷಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲು ಆಗಮಿಸಿದ್ದರು.

ತಮ್ಮ ಜೆಪಿ ನಗರ ನಿವಾಸದಿಂದ ವಿಧಾನಸೌಧಕ್ಕೆ ಕುಮಾರಸ್ವಾಮಿಯವರು ಹೋಗುವ ವೇಳೆ ಶಾಲಾ ವಿದ್ಯಾರ್ಥಿಗಳು ‘ಸಿಎಂ ಸಾರ್ ಸಿಎಂ ಸಾರ್’ ಎಂದು ಜೋರಾಗಿ ಕೂಗಿ ಅವರ ಗಮನ ಸೆಳೆದರು.

ವಿದ್ಯಾರ್ಥಿಗಳ ಕೂಗು ಕೇಳುತ್ತಿದ್ದಂತೆ ಕಾರಿನಿಂದ ಇಳಿದು ಅವರ ಮನವಿ ಸ್ವೀಕರಿಸಿದ ಕುಮಾರಸ್ವಾಮಿಯವರು, ತಮಗೆ ಒಂದು ವಾರ ಕಾಲಾವಕಾಶ ಕೊಡಿ ಅಷ್ಟರೊಳಗೆ ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...