
ಮಂಗಳೂರು: ವಿದ್ಯಾರ್ಥಿನಿಯರೊಂದಿಗೆ ವಿಹಾರಕ್ಕೆ ತೆರಳಿದ್ದ ಯುವಕರಿಬ್ಬರ ಮೇಲೆ, ಸ್ಥಳೀಯ ಯುವಕರು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಕಾರಿಂಜ ಬೆಟ್ಟದಲ್ಲಿ ನಡೆದಿದೆ.
ಎನ್.ಸಿ. ರೋಡ್ ನಿವಾಸಿ ಇರ್ಫಾನ್, ಇರ್ವತ್ತೂರಿನ ನಜೀಮ್ ಅವರು ಹಲ್ಲೆಗೊಳಗಾದವರು. ಇರ್ಫಾನ್ ರಿಕ್ಷಾ ಚಾಲಕನಾಗಿದ್ದು, ಆತನ ಆಟೊದಲ್ಲಿ ಕಾಲೇಜೊಂದರ ಐವರು ವಿದ್ಯಾರ್ಥಿನಿಯರು ದಿನಾಲು ಟ್ಯೂಷನ್ ಗೆ ಹೋಗಿ ಬರುತ್ತಿದ್ದರು.
ಇವರೆಲ್ಲಾ ಟ್ಯೂಷನ್ ಮುಗಿಸಿಕೊಂಡು ಕಾರಿಂಜಬೆಟ್ಟಕ್ಕೆ ತೆರಳಿದ್ದು, ಅವರೊಂದಿಗೆ ನಜೀಮ್ ಕೂಡ ತೆರಳಿದ್ದಾನೆ. ಬೆಟ್ಟದ ಮೇಲೆ ವಿದ್ಯಾರ್ಥಿನಿಯರೊಂದಿಗೆ ಅನ್ಯಧರ್ಮೀಯ ಯುವಕರು ಇರುವುದನ್ನು ಗಮನಿಸಿದ ಸ್ಥಳೀಯ ಯುವಕರು, ಹಲ್ಲೆ ಮಾಡಿ ಪುಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.