alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿ ಜೊತೆ ಅಕ್ರಮ ಸಂಬಂಧಕ್ಕೆ ಶಿಕ್ಷಕ ಮಾಡಿದ್ದೇನು?

messege nm 99

ಹೆಣ್ಣುಮಕ್ಕಳಿಗೆ ಎಲ್ಲಿಯೂ ಸೇಫ್ ಅಲ್ಲ ಎಂಬುದು ಇತ್ತೀಚಿನ ಅಹಿತಕರ ಘಟನೆಗಳಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು. ಶಾಲೆಗಳಲ್ಲಿ ಕೆಲವು ಕಾಮುಕ ಶಿಕ್ಷಕರು ನಡೆಸಿದ ಪೋಲಿ ಆಟದ ಬಗ್ಗೆ ಬೇಕಾದಷ್ಟು ಉದಾಹರಣೆಗಳಿವೆ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ ನೋಡಿ.

ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆಯೇ ಕಾಮದ ದೃಷ್ಠಿ ಬೀರಿದ ಶಿಕ್ಷಕನೊಬ್ಬ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಪೀಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಜಾಲ್ ಪಕ್ಕಲಡ್ಕದ ಖಾಸಗಿ ಅನುದಾನಿತ ಹೈಸ್ಕೂಲ್ ನಲ್ಲಿ ಶಿಕ್ಷಕನೊಬ್ಬ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ತನ್ನ ಕಾಮದ ದೃಷ್ಠಿ ಬೀರಿದ್ದಾನೆ. ಆಕೆಯನ್ನು ಪರಿಚಯ ಮಾಡಿಕೊಂಡಿದ್ದಲ್ಲದೇ, ವಾಟ್ಸಾಪ್, ಫೇಸ್ ಬುಕ್ ನಲ್ಲಿ ಮೆಸೇಜ್ ಹಾಕುವ ಮೂಲಕ ಆತ್ಮೀಯನೆಂಬಂತೆ ನಟಿಸಿದ್ದಾನೆ.

ಕೆಲವು ದಿನಗಳ ಬಳಿಕ ಕಾಮುಕ ಶಿಕ್ಷಕ ಅಶ್ಲೀಲ ಪೋಟೋ, ಮೆಸೇಜ್ ಕಳಿಸಿದ್ದಲ್ಲದೇ, ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಪೀಡಿಸಿದ್ದಾನೆ. ಈ ಶಿಕ್ಷಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಪೋಷಕರಿಗೆ ಹಾಗೂ ಶಾಲೆಯ ಬೇರೆ ಶಿಕ್ಷಕರಿಗೆ ವಿಷಯ ತಿಳಿಸಿದ್ದಾಳೆ.

ಶಿಕ್ಷಕ ತನಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್ ಹಾಗೂ ಪೋಟೋಗಳನ್ನು ತೋರಿಸಿ, ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಇದಾದ ನಂತರ ಆರೋಪಿ ಶಿಕ್ಷಕ ಪರಾರಿಯಾಗಿದ್ದಾನೆ. ಈ ಹಿಂದೆ ಹಲವು ವಿದ್ಯಾರ್ಥಿನಿಯರಿಗೆ ಈ ಕಾಮುಕ ಶಿಕ್ಷಕ ಲೈಂಗಿ ಕಿರುಕುಳ ನೀಡಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...