alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಯುಸಿ ವಿದ್ಯಾರ್ಥಿನಿ ಕಿಡ್ನಾಪ್ ಕೇಸ್ ಗೆ ಹೊಸ ಟ್ವಿಸ್ಟ್

download-1

ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ ಎನ್ನಲಾಗಿದ್ದ ಪಿಯುಸಿ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಲ್ಲಿ ಯಾವುದೇ ಅಪಹರಣ ನಡೆದಿರಲಿಲ್ಲ. ಟ್ಯೂಷನ್ ನಿಂದ ಮನೆಗೆ ಬರಲು ತಡವಾದ ಕಾರಣ ಹುಡುಗಿ ಅಪಹರಣದ ಕಥೆ ಕಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ

ಏಪ್ರಿಲ್ 17 ರಂದು ಬಸವನಗುಡಿಯಲ್ಲಿ 4 ಮಂದಿ, ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ್ದಾರೆಂದು ದೂರು ದಾಖಲಾಗಿತ್ತು. ಬಿಳಿ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಅಪಹರಿಸಿದ್ದರು ಎಂದು ಹುಡುಗಿ ವಿಚಾರಣೆ ವೇಳೆ ಹೇಳಿದ್ದಳು. ಅಪಹರಣಕಾರರು ಹಲ್ಲೆ ಮಾಡಿದ್ದಾರೆ ಎಂದೂ ವಿದ್ಯಾರ್ಥಿನಿ ಹೇಳಿದ್ದಳು.

ಆದ್ರೆ ಆಕೆ ಹೇಳಿಕೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಘಟನೆ ನಡೆದ ಸ್ಥಳದಲ್ಲಿ ಮೊಬೈಲ್ ಲೊಕೇಷನ್ ಸಿಕ್ಕಿರಲಿಲ್ಲ. ವಿದ್ಯಾರ್ಥಿನಿಯೇ ಕಿಡ್ನಾಪ್ ಕಥೆ ಕಟ್ಟುತ್ತಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈಗ ವಿದ್ಯಾರ್ಥಿನಿ ಸತ್ಯ ಒಪ್ಪಿಕೊಂಡಿದ್ದಾಳೆ. ಟ್ಯೂಷನ್ ನಿಂದ ಮನೆಗೆ ಬರಲು ತಡವಾಯ್ತು. ಮನೆಯಲ್ಲಿ ಬೈಗುಳ ಕೇಳಬೇಕಾಗುತ್ತೆ ಎನ್ನುವ ಕಾರಣಕ್ಕೆ ಹೀಗೆ ಮಾಡ್ದೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...