alex Certify
ಕನ್ನಡ ದುನಿಯಾ       Mobile App
       

Kannada Duniya

ವಿಕೃತಕಾಮಿಯ ಕಾಟಕ್ಕೆ ಬೇಸತ್ತು ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು

ವಿಕೃತಕಾಮಿಯೊಬ್ಬ ಪದೇ ಪದೇ ನೀಡುತ್ತಿದ್ದ ಕಾಟಕ್ಕೆ ಭಯಭೀತರಾದ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್. ಆಸ್ಪತ್ರೆ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿದ್ದ 380 ವಿದ್ಯಾರ್ಥಿನಿಯರ ಪೈಕಿ 269 ಮಂದಿ ತಮ್ಮ ಪೋಷಕರನ್ನು ಕರೆಸಿಕೊಂಡು ಸ್ವ ಇಚ್ಛೆಯಿಂದ ಮುಚ್ಚಳಿಕೆ ಬರೆದುಕೊಟ್ಟು ಹಾಸ್ಟೆಲ್ ತೊರೆದಿದ್ದಾರೆ.

ಶನಿವಾರದಂದು ಈ ವಿಕೃತಕಾಮಿ ನೀಡಿದ ತೊಂದರೆಯಿಂದ ಮೊದಲೇ ಭಯಭೀತರಾಗಿದ್ದ ವಿದ್ಯಾರ್ಥಿನಿಯರು ಸೋಮವಾರ ಹಾಸ್ಟೆಲ್ ಕೊಠಡಿಗಳ ಮೇಲೆ ಕಲ್ಲುಗಳು ಬಂದು ಬೀಳಲಾರಂಭಿಸಿದಾಗ ಮತ್ತಷ್ಟು ಭೀತಿಗೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ರಕ್ಷಣೆ ನೀಡುವುದಾಗಿ ಅಧಿಕಾರಿಗಳು ಎಷ್ಟೇ ಭರವಸೆ ನೀಡಿದರೂ ಅದನ್ನು ಒಪ್ಪಲು ತಯಾರಿರದ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...