alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿಗೆ ಹೋದ ವಿದ್ಯಾರ್ಥಿನಿ ಶವವಾಗಿ ಪತ್ತೆ: ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ್ರಾ ಪಾಪಿಗಳು…?

ಕಾಲೇಜಿಗೆಂದು ಹೋದ ಹಾವೇರಿಯ ಸವಣೂರು ವಿದ್ಯಾರ್ಥಿನಿಯೊಬ್ಬರ ಮೃತದೇಹ ಅರೆಬರೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಊರ ಹೊರಗಿನ ಬ್ರಿಡ್ಜ್ ಬಳಿ ಪತ್ತೆಯಾಗಿದೆ.

ಮಣ್ಣೂರು ಗ್ರಾಮದ ನಿವಾಸಿ ರೇಣುಕಾ ಪಾಟೀಲ(17) ಮೃತ ವಿದ್ಯಾರ್ಥಿನಿ. ಹಾವೇರಿ ನಗರದ ಜಿ.ಎಚ್. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರೇಣುಕಾ ಆ.6 ರಂದು ಎಂದಿನಂತೆ ಕಾಲೇಜಿಗೆ ಹೋಗಿದ್ದಾಳೆ. ಆದರೆ ಸಂಜೆಯಾದರೂ ಮನೆಗೆ ವಾಪಸ್ ಆಗಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಊರೆಲ್ಲ ಹುಡುಕಾಟ ನಡೆಸಿ ಕೊನೆಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ಪತ್ತೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ನಾಲ್ಕು ದಿನಗಳ ಬಳಿಕ ವರದಹಳ್ಳಿ ಗ್ರಾಮದ ಬ್ರಿಡ್ಜ್ ಬಳಿ ರೇಣುಕಾಳ ಶವ ಅರ್ಧಂಬರ್ದ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ರೇಣುಕಾಳನ್ನ ಹತ್ಯೆ ಮಾಡಿ ಬಳಿಕ ಸಾಕ್ಷ್ಯನಾಶಪಡಿಸಲೆಂದು ಅರ್ಧಂಬರ್ದ ಸುಟ್ಟು ಪರಾರಿ ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...