alex Certify
ಕನ್ನಡ ದುನಿಯಾ       Mobile App
       

Kannada Duniya

‘ಸ್ಮೋಕ್ ಫ್ರೀ’ ಬೆಂಗಳೂರು ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದ ಹಿನ್ನಲೆಯಲ್ಲಿ ನಗರದ ಬಾರ್, ರೆಸ್ಟೋರೆಂಟ್, ಪಬ್, ರಸ್ತೆ ಬದಿಯ ಅಂಗಡಿಗಳಲ್ಲಿ ತಂಬಾಕು ಪದಾರ್ಥಗಳ ಸೇವನೆ ಮತ್ತು ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕರ್ನಾಟಕ ಧೂಮಪಾನ ನಿಷೇದ ಕಾಯ್ದೆ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಬಿಬಿಎಂಪಿ ಸಭೆಯಲ್ಲಿ ಮೇಯರ್ ಸಂಪತ್ ರಾಜ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ನಗರದಲ್ಲಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ.14 ರಷ್ಟು ಧೂಮಪಾನ ಸೇವಿಸುತ್ತಾರೆ.

ಶೇ.24 ರಷ್ಟು ಮಂದಿ ಕೇವಲ ಹೊಗೆ ಸೇವನೆಯಿಂದಲೇ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಧೂಮಪಾನ ಮಾಡದವರ, ಮಕ್ಕಳ ಹಾಗೂ ಮಹಿಳೆಯರನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಮೋಕ್ ಫ್ರೀ ಬೆಂಗಳೂರು ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮೇಯರ್, ಅಕ್ರಮವಾಗಿ ಧೂಮಪಾನ ವಲಯವನ್ನು ನಿರ್ಮಿಸಿಕೊಂಡವರು ಕೂಡಲೇ ತೆರವುಗೊಳಿಸಬೇಕು. ತೆರವುಗೊಳಿಸದ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಕಾನೂನಿನ ಅನ್ವಯ ರಚಿಸಿಕೊಂಡವರು ತಂಬಾಕು ನಿಯಂತ್ರಣ ಕೋಶದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...