alex Certify
ಕನ್ನಡ ದುನಿಯಾ       Mobile App
       

Kannada Duniya

ಶಿರಾಳಕೊಪ್ಪದಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯೊಂದು ಮನೆಯೊಳಗೆ ನುಗ್ಗಿ 4 ತಿಂಗಳ ಮಗುವನ್ನು ಕಚ್ಚಿದೆ.

ಹಾಲ್ ನಲ್ಲಿ ಮಗು ಹಾಗೂ  4 ವರ್ಷದ ಮತ್ತೊಂದು ಮಗು ಜೊತೆಗಿದ್ದ ವೇಳೆ ಮನೆಯೊಳಗೆ ನುಗ್ಗಿದ ಬೀದಿ ನಾಯಿಯೊಂದು, 4 ತಿಂಗಳ ಮಗುವಿನ ಮೇಲೆ ದಾಳಿ ಮಾಡಿದ್ದು, ಕುತ್ತಿಗೆ, ಮುಖವನ್ನು ಕಚ್ಚಿದೆ.

ಮನೆಯ ಹಿಂಭಾಗದಲ್ಲಿದ್ದ ಪೋಷಕರು ಮಗುವಿನ ಚೀರಾಟ ಕೇಳಿ ಧಾವಿಸಿ ಬಂದಿದ್ದಾರೆ. ಅಷ್ಟರಲ್ಲಾಗಲೇ ನಾಯಿ ಮಗುವನ್ನು ಕಚ್ಚಿ ಎಳೆದೊಯ್ಯಲು ಪ್ರಯತ್ನಿಸಿರುವುದು ಕಂಡಿದ್ದು, ಅದನ್ನು ಓಡಿಸಿ ಮಗುವನ್ನು ರಕ್ಷಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...