alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗೆ ಆಹಾರವಾಗುತ್ತಿತ್ತು ಹೆತ್ತವರಿಗೂ ಬೇಡವಾದ ಕಂದನ ಶವ

baby

ಮಂಡ್ಯದಲ್ಲಿ ಬೀದಿ ನಾಯಿಯೊಂದು ನವಜಾತ ಶಿಶುವನ್ನು ತಿನ್ನಲು ಪ್ರಯತ್ನಿಸಿದೆ. ಮಿಮ್ಸ್ ಬಳಿ ನಾಯಿ, ಬಾಯಲ್ಲಿ ಮಗುವನ್ನು ಕಚ್ಚಿಕೊಂಡು ಓಡಿ ಹೋಗುತ್ತಿತ್ತು. ಅದನ್ನು ಗಮನಿಸಿದ ಸ್ಥಳೀಯರು ಕಲ್ಲು ಹೊಡೆದು ನಾಯಿ ಬಾಯಿಯಿಂದ ಮಗುವನ್ನು ತಪ್ಪಿಸಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು, ಆದ್ರೆ ಅಷ್ಟರಲ್ಲಾಗ್ಲೇ ಮಗು ಮೃತಪಟ್ಟಿತ್ತು.

ರಿಜ್ವಾನ್ ಹಾಗೂ ಸಮೀವುಲ್ಲಾ ದಂಪತಿಗೆ ಜನಿಸಿದ ಹೆಣ್ಣು ಮಗು ಅದಾಗಿತ್ತು. ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು. ಶಿಶುವನ್ನು ಹೊರತೆಗೆದ ವೈದ್ಯರು ಹೆತ್ತವರಿಗೆ ಹಸ್ತಾಂತರಿಸಿದ್ದರು. ಮಗುವಿನ ಅಂತ್ಯಸಂಸ್ಕಾರ ಮಾಡುವ ಬದಲು ಸಮೀವುಲ್ಲಾ, ಮೃತದೇಹವನ್ನು ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಬಳಿ ಇದ್ದ ಕಸದ ತೊಟ್ಟಿಯಲ್ಲಿ ಬಿಸಾಡಿದ್ದ.

ಮಗುವಿನ ಮೃತದೇಹ ನಾಯಿಗಳ ಕಣ್ಣಿಗೆ ಬಿದ್ದಿದೆ. ಬೀದಿ ನಾಯಿ ಅದನ್ನು ತಿಂದು ಹಾಕಲು ಯತ್ನಿಸಿದೆ. ಮಗುವಿನ ತಂದೆ ಸಮೀವುಲ್ಲಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಹಾಗೂ ಮಿಮ್ಸ್ ನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಹನುಮಂತ ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...