alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟಾಕ್ ಬ್ರೋಕಿಂಗ್ ಹೆಸರಲ್ಲಿ ಬಿತ್ತು ಪಂಗನಾಮ

money 56678ಅದ್ಧೂರಿಯಾಗಿ ಮದುವೆಯಾಗಲು ಸ್ಟಾಕ್ ಬ್ರೋಕರ್ ಒಬ್ಬ ಹೂಡಿಕೆದಾರರಿಗೆ ಪಂಗನಾಮ ಹಾಕಿದ್ದಾನೆ. ಯಾರದ್ದೋ ದುಡ್ಡಲ್ಲಿ ಮದುವೆ ಮಾಡ್ಕೊಂಡು ಮಜಾ ಉಡಾಯಿಸಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ವಕೀಲ ಹಾಗೂ ಮತ್ತಿಬ್ಬರನ್ನು ಪುಸಲಾಯಿಸಿ 1.69 ಕೋಟಿ ರೂಪಾಯಿ ಪಡೆದು ಆ ದುಡ್ಡಲ್ಲಿ ಮದುವೆಯಾಗಿದ್ದಾನೆ.

33 ವರ್ಷದ ಪವನ್ ಕುಮಾರ್ ಕಾರ್ತಿ ವಿ. ವಿರುದ್ಧ ಬೆಂಗಳೂರಿನ ಆರ್.ಟಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಶಿಲ್ಪಾ ಸ್ಟಾಕ್ ಬ್ರೋಕರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸ್ಟಾಕ್ ಬ್ರೋಕರ್ ಆಗಿದ್ದ. ಈತ ವಕೀಲ ಮುತ್ತು ಪಿ. ಎಂಬುವವರಿಂದ 1.05 ಕೋಟಿ ರೂಪಾಯಿ ಪಡೆದಿದ್ದ. ಶಶಿಕಲಾ ಕೆ.ಟಿ. 32 ಲಕ್ಷ ರೂಪಾಯಿ ಹಾಗೂ ಯತೀಶ್ 22 ಲಕ್ಷ ರೂಪಾಯಿ ನೀಡಿದ್ದರು. ಪವನ್ ಕುಮಾರ್ ಬಳಿ ಮದುವೆಗೆ ಸಾಕಷ್ಟು ದುಡ್ಡಿರಲಿಲ್ಲ. ಅದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿದ ಆತ, ಈ ಮೂವರ ಬಳಿ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಹಣ ಹೂಡುವಂತೆ ಪ್ರೇರೇಪಿಸಿದ್ದ. ತಿಂಗಳಿಗೆ ಶೇ.7-8ರಷ್ಟು ಬಡ್ಡಿ ಕೊಡೋದಾಗಿ ಆಸೆ ತೋರಿಸಿದ್ದ. ಸ್ನೇಹಿತ ಯತೀಶ್ ಎಂಬಾತನಿಂದಲೂ 10 ಲಕ್ಷ ರೂಪಾಯಿ ಪಡೆದಿದ್ದ. ಸ್ಟಾಕ್ ಮಾರ್ಕೆಟ್ ಬಗ್ಗೆ ಐಡಿಯಾ ಇಲ್ಲದೇ ಇದ್ರೂ ವಕೀಲ ಮುತ್ತು ಕೂಡ 1.05 ಕೋಟಿ ರೂಪಾಯಿ ಕೊಟ್ಟಿದ್ದರು.

ಬಡ್ಡಿ ಹಣ ಕೊಡಲು ಪವನ್ ತಡ ಮಾಡಿದಾಗಲೇ ಶಶಿಕಲಾಗೆ ಅನುಮಾನ ಶುರುವಾಗಿತ್ತು. ಅಕೌಂಟ್ ಚೆಕ್ ಮಾಡಿದ್ರೆ ಬ್ಯಾಲೆನ್ಸ್ ಕೂಡ ಶೂನ್ಯ. ಮುತ್ತು ಹಾಗೂ ಯತೀಶ್ ಅಕೌಂಟ್ ನ ಬ್ಯಾಲೆನ್ಸ್ ಕೂಡ ಸೊನ್ನೆ. ಹಣ ವಾಪಸ್ ಕೊಡುವಂತೆ ಕೇಳಿದ್ರೆ ಪವನ್ ಕುಮಾರ್ ನಿರಾಕರಿಸಿದ್ದ, ಮೂವರನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದ. ಬೇಸತ್ತ ಶಶಿಕಲಾ, ಮುತ್ತು ಹಾಗೂ ಯತೀಶ್ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...