alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಲವ್: ಸೆಕ್ಸ್ ಬಳಿಕ ಯುವತಿಗೆ ಕೈಕೊಟ್ಟ ಯುವಕ

ಬೆಂಗಳೂರು: ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಪರಿಚಯವಾದ ಯುವಕ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಡಿವಾಳ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಕೇರಳ ಮೂಲದ ಯುವಕ ಅಜ್ಮಲ್ ಮೊಹಮ್ಮದ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಗರದ ಪೇಯಿಂಗ್ ಗೆಸ್ಟ್ ನಲ್ಲಿ ವಾಸವಿರುವ ವೈದ್ಯಕೀಯ ಪದವೀಧರೆ ಯುವತಿಗೆ ಫೇಸ್ ಬುಕ್ ನಲ್ಲಿ ಅಜ್ಮಲ್ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಮದುವೆಯಾಗುವುದಾಗಿ ಯುವಕ ಯುವತಿಯನ್ನು ನಂಬಿಸಿದ್ದು, ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದಾನೆ.

ಈ ವೇಳೆ ಮಡಿವಾಳದ ವಸತಿಗೃಹಕ್ಕೆ ಕರೆದೊಯ್ದು ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ ಯುವತಿಯಿಂದ ಒಮ್ಮೆ 30 ಸಾವಿರ ರೂ. ಪಡೆದ ಅಜ್ಮಲ್, ಕೆಲ ದಿನಗಳ ಬಳಿಕ ವಾಪಸ್ ನೀಡಿದ್ದಾನೆ. ಅದಾದ ಬಳಿಕ 70 ಸಾವಿರ ರೂ. ಪಡೆದುಕೊಂಡಿದ್ದಾನೆ.

ಈ ಹಣವನ್ನು ವಾಪಸ್ ನೀಡುವ ನೆಪದಲ್ಲಿ ಮತ್ತೆ ವಸತಿ ಗೃಹಕ್ಕೆ ಯುವತಿಯನ್ನು ಕರೆಸಿಕೊಂಡು 20 ದಿನ ಇರಿಸಿಕೊಂಡಿದ್ದ. ಯುವತಿ ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿ ಅಜ್ಮಲ್ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...