alex Certify
ಕನ್ನಡ ದುನಿಯಾ       Mobile App
       

Kannada Duniya

ಸೋರಿಕೆಯಾಯ್ತು SSLC ಪ್ರಶ್ನೆ ಪತ್ರಿಕೆ, ಮರು ಪರೀಕ್ಷೆ ಇಲ್ಲ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭದ ದಿನವೇ ಆಘಾತಕಾರಿ ಘಟನೆ ನಡೆದಿದೆ. ವಿಜಯಪುರದ ಮುದ್ದೇಬಿಹಾಳದಲ್ಲಿ ಕನ್ನಡ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರನ್ನು ಅಮಾನತು ಮಾಡಲಾಗಿದೆ.

ಕನ್ನಡ ಭಾಷೆ ಪರೀಕ್ಷೆ ಆರಂಭವಾದ 1 ಗಂಟೆಯಲ್ಲೇ ಸೋರಿಕೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ವಿದ್ಯಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಹರಿಬಿಟ್ಟಿದ್ದಾನೆ. ಮುದ್ದೇಬಿಹಾಳದ ಪರೀಕ್ಷಾ ಕೇಂದ್ರವೊಂದರ ವಿದ್ಯಾರ್ಥಿ ಹೀಗೆ ಮಾಡಿದ್ದು, ಕೊಠಡಿ ಮೇಲ್ವಿಚಾರಕ ಹೆಚ್.ಬಿ. ಲಮಾಣಿ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಂ.ಬಿ. ಮುದ್ದೇಬಿಹಾಳ, ಕಸ್ಟೋಡಿಯನ್ ಐ.ಬಿ. ಸಜ್ಜನ ಅವರನ್ನು ಅಮಾನತು ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಕಾರಣನಾದ ವಿದ್ಯಾರ್ಥಿಯನ್ನು 3 ವರ್ಷ ಡಿಬಾರ್ ಮಾಡಲಾಗಿದೆ.

ಪರೀಕ್ಷೆ ಆರಂಭವಾಗುವ ಮೊದಲು ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ. ಪರೀಕ್ಷೆ ಮುಗಿಯುವ 35 ನಿಮಿಷ ಮೊದಲು ಬಹಿರಂಗವಾಗಿರುವ ಕಾರಣ, ಮರುಪರೀಕ್ಷೆ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ಮರುಪರೀಕ್ಷೆ ನಡೆಸುವುದಿಲ್ಲ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...