alex Certify
ಕನ್ನಡ ದುನಿಯಾ       Mobile App
       

Kannada Duniya

‘ಸುದೀಪ್ ನಮ್ಮ ಸಮಾಜದವರು, ನನ್ನನ್ನು ಬೆಂಬಲಿಸಬೇಕು’

ಚಾಮರಾಜನಗರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಅವರ ಪರವಾಗಿ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಸಂಸದ ಬಿ. ಶ್ರೀರಾಮುಲು ವಿರೋಧ ವ್ಯಕ್ತಪಡಿಸಿದ್ದಾರೆ.

ಸುದೀಪ್ ನಮ್ಮ ಸಮಾಜದವರಾಗಿದ್ದು, ಅವರು ನನ್ನನ್ನು ಬೆಂಬಲಿಸಬೇಕು ಎಂದು ಶ್ರೀರಾಮುಲು ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲಕ್ಕೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಎಂ. ಪರ ಪ್ರಚಾರ ಮಾಡುವ ಬದಲು ಸುದೀಪ್ ನನಗೆ ಬೆಂಬಲಿಸಲಿ ಎಂದು ಹೇಳಿದ್ದಾರೆ.

ನಮ್ಮ ಸಮಾಜದ ಕಲಾವಿದರಾದ ಅವರು ನನಗೆ ಬೆಂಬಲಿಸಲಿ. ನಮಗೆ ಚಿತ್ರರಂಗ ಗೊತ್ತಿಲ್ಲ, ನಾವು ರಾಜಕೀಯದವರು. ನಮ್ಮ ಸಮಾಜದ ಕಲಾವಿದರಾದ ಸುದೀಪ್ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಅವರಲ್ಲಿ ನಾವು ಒಬ್ಬರು. ಸುದೀಪ್ ಬಗ್ಗೆ ಗೌರವವಿದೆ. ತಮ್ಮ ಸಮಾಜದವರೇ ಆದ ಶ್ರೀರಾಮುಲು ಅವರನ್ನು ಗೆಲ್ಲಿಸಲು ಸುದೀಪ್ ಪ್ರಯತ್ನಿಸಲಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...