alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ರನ್ ವೇ ಲೈಟ್ ಗೆ ಡಿಕ್ಕಿ ಹೊಡೆದ ವಿಮಾನ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವೊಂದು ರನ್ ವೇ ಲೈಟ್ ಗೆ ಡಿಕ್ಕಿ ಹೊಡೆದಿದೆ. ವಿಮಾನ ಲ್ಯಾಂಡ್ ಆದ ಬಳಿಕ ಈ ಘಟನೆ ನಡೆದಿದ್ದು, ಸುಮಾರು 40 ನಿಮಿಷಗಳ ಕಾಲ ರನ್ ವೇ ಬಂದ್ ಮಾಡಲಾಗಿತ್ತು.

SG 1238 ವಿಮಾನ ಹೈದ್ರಾಬಾದ್ ನಿಂದ ಆಗಮಿಸಿತ್ತು. ಅಪಘಾತದಲ್ಲಿ ರನ್ ವೇನಲ್ಲಿದ್ದ ಮೂರು ಲೈಟ್ ಗಳಿಗೆ ಹಾನಿಯಾಗಿದೆ. ಆದ್ರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ವಿಮಾನಕ್ಕೆ ಕೂಡ ಹಾನಿಯಾಗಿಲ್ಲ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 10.47ರಿಂದ 11.28ರವರೆಗೆ ರನ್ ವೇ ಬಂದ್ ಮಾಡಲಾಗಿತ್ತು. ಆ ರನ್ ವೇನಿಂದ ಹಾರಾಟ ಮಾಡಬೇಕಾಗಿದ್ದ 10 ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ. ಅವುಗಳಲ್ಲಿ 8 ವಿಮಾನಗಳು ಚೆನ್ನೈ ಹಾಗೂ ತಲಾ ಒಂದೊಂದು ವಿಮಾನಗಳು ತಿರುಚಿರಪಳ್ಳಿ ಹಾಗೂ ಕೊಯಂಬತ್ತೂರಿಗೆ ತೆರಳಬೇಕಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...