alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿ ಸ್ಪೆಷಲ್ ರೂಂ ಬೇಡಿಕೆಯಿಟ್ಟ ದುನಿಯಾ ವಿಜಯ್

ಬೆಂಗಳೂರು: ಜಿಮ್ ಟ್ರೇನರ್ ಮಾರುತಿ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದುನಿಯಾ ವಿಜಯ್ ತಮಗೆ ಜೈಲಿನಲ್ಲಿ ಸ್ಪೆಷಲ್ ರೂಂ ಬೇಕೆಂದು ಬೇಡಿಕೆಯಿಟ್ಟಿದ್ದಾರೆನ್ನಲಾಗಿದೆ.

ಮಾರುತಿ ಗೌಡ ಕಿಡ್ನಾಪ್​ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್​ ಹಾಗೂ ಸಹಚರರಾದ, ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್, ಕೋಚ್ ಮಣಿಯವರಿಗೆ 8ನೇ ಎಸಿಎಂಎಂ ನ್ಯಾಯಾಲಯ ನಿನ್ನೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಈ ನಡುವೆ ದುನಿಯಾ ವಿಜಯ್ ತಮಗೆ ಜೈಲಿನಲ್ಲಿ ವಿಶೇಷ ಸೌಲಭ್ಯವಿರುವ ಕೊಠಡಿ ಬೇಕೆಂದು ಮನವಿ ಮಾಡಿದ್ದು, ಹೀಗಾಗಿ ವಿಜಯ್ ಗೆ ಸ್ಪೆಷಲ್ ರೂಂ ನೀಡಿ ಉಳಿದ ಆರೋಪಿಗಳಿಗೆ ಬ್ಯಾರಕ್ 1 ರಲ್ಲಿ ಸಾಮಾನ್ಯ ಕೈದಿಗಳಂತೆ ಇಡಲಾಗಿದೆ.

ವಿಚಾರಣಾಧೀನ ಕೈದಿಯಾಗಿರುವ ದುನಿಯಾ ವಿಜಯ್ ಗೆ ಕೈದಿ ನಂ.9035 ಸಂಖ್ಯೆ ನೀಡಲಾಗಿದೆ. ರಾತ್ರಿಯೆಲ್ಲ ಜೈಲಿನಲ್ಲಿ ಕಳೆದ ವಿಜಯ್ ಬೆಳಿಗ್ಗೆ ಜೈಲಿನ ತಿಂಡಿ ಪುಳಿಯೊಗರೆ, ಟೀ ಸೇವಿಸಿದ್ದಾರೆ. ಇನ್ನು ರಾತ್ರಿ ವಿಜಯ್ ಜೈಲು ಸಿಬ್ಬಂದಿಗಳಿಗೆ ಸಿಗರೇಟ್​​ ಕೇಳಿದ್ದಾರೆ ಎನ್ನಲಾಗಿದ್ದು, ಸಿಬ್ಬಂದಿಗಳು ಇದಕ್ಕೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...