alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಯರ್ ಸೀಟ್ ಮೇಲೆ ಪವಡಿಸಿದ್ದ ಕೆರೆ ಹಾವು

snake 45789ಕೆರೆ ಹಾವೊಂದು ಕಲಬುರಗಿ ನಗರಪಾಲಿಕೆ ಕಛೇರಿ ಪ್ರವೇಶಿಸಿದ್ದಲ್ಲದೇ ಮೇಯರ್ ಸೀಟಿನ ಮೇಲೆ ಏರಿದ್ದು, ಇದನ್ನು ಕಂಡವರು ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಇಂದು ಈ ಘಟನೆ ನಡೆದಿದ್ದು, ಮೇಯರ್ ಅವರ ಕೊಠಡಿ ಪ್ರವೇಶಿಸಿದ್ದ ಹಾವು, ಮೇಯರ್ ಅವರ ಸೀಟಿನ ಮೇಲೆ ಆರಾಮಾಗಿ ಪವಡಿಸಿದೆ.

ಕಛೇರಿ ಬಾಗಿಲು ತೆರೆದು ಒಳ ಹೊಕ್ಕವರು ಹಾವನ್ನು ಕಂಡು ಬೆಚ್ಚಿ ಬಿದ್ದಿದ್ದು, ಕೂಡಲೇ ಹಾವು ಹಿಡಿಯುವವರನ್ನು ಕರೆಸಿ ಅದನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ. ಇದು ಕೆರೆ ಹಾವಾಗಿದ್ದ ಕಾರಣ ಯಾವುದೇ ಆಪಾಯವಿಲ್ಲವೆನ್ನಲಾಗಿದ್ದರೂ ಹಾವನ್ನು ಕಂಡವರು ಕೆಲ ಕಾಲ ಬೆಚ್ಚಿ ಬಿದ್ದಿದ್ದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...