alex Certify
ಕನ್ನಡ ದುನಿಯಾ       Mobile App
       

Kannada Duniya

ಕಚ್ಚಿದ ಹಾವನ್ನೇ ಸಾಯಿಸಿದ ವೃದ್ಧೆ

snake

ಶಿವಮೊಗ್ಗ: ತಮಗೆ ಕಚ್ಚಿದ ಹಾವನ್ನೇ ಸಾಯಿಸಿ ಕೈಯಲ್ಲಿಡಿದುಕೊಂಡು ಬಂದ ಘಟನೆ ಹಲವಾರು ನಡೆದಿವೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ವ್ಯಕ್ತಿಯೊಬ್ಬ, ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಅದನ್ನು ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದು ಸುದ್ದಿಯಾಗಿತ್ತು.

ಅದೇ ಘಟನೆಯನ್ನು ನೆನಪಿಸುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ನಡೆದಿದೆ. ಆದರೆ, ತನಗೆ ಕಚ್ಚಿದ ಹಾವನ್ನು ಸಾಯಿಸಿ ವೃದ್ಧೆ ಸಾವನ್ನಪ್ಪಿದ್ದಾರೆ. ಹೊಸನಗರ ತಾಲ್ಲೂಕು ಕೋಡೂರಿನ ಅನಾಥ ವೃದ್ಧೆ 70 ವರ್ಷದ ಜಯಲಕ್ಷ್ಮಿ ವಿಕಲಚೇತನರಾಗಿದ್ದು, ಕೋಳಿ ಸಾಕಿ ಜೀವನ ಸಾಗಿಸುತ್ತಿದ್ದರು. ಅವರು ಕೋಳಿ ಗೂಡಿನಲ್ಲಿದ್ದ ಮೊಟ್ಟೆಯನ್ನು ತೆಗೆಯುವ ಸಂದರ್ಭದಲ್ಲಿ ಹಾವೊಂದು ಕಚ್ಚಿದೆ. ವಿಚಲಿತರಾಗದ ಜಯಲಕ್ಷ್ಮಿ ತನಗೆ ಕಚ್ಚಿದ ಹಾವನ್ನೆ ಕಚ್ಚಿ ಸಾಯಿಸಿದ್ದಾರೆ.

ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...