alex Certify
ಕನ್ನಡ ದುನಿಯಾ       Mobile App
       

Kannada Duniya

ಶೂ ಹಾಕಿಕೊಳ್ಳಲು ಹೋಗಿ ಬೆಚ್ಚಿ ಬಿದ್ರು, ಕಾರಣ ಗೊತ್ತಾ..?

ಮೈಸೂರು: ಹಾವುಗಳು ಇಲ್ಲದ ಸ್ಥಳವಿಲ್ಲ ಎನ್ನುತ್ತಾರೆ. ಇದಕ್ಕೆ ಪೂರಕವಾದ ಹಲವಾರು ಘಟನೆಗಳ ಬಗ್ಗೆ ಓದಿರುತ್ತೀರಿ. ಅಂತಹುದೇ ಘಟನೆಯೊಂದರ ವರದಿ ಇಲ್ಲಿದೆ.

ಮನೆಯ ಮುಂದೆ ಬಿಚ್ಚಿ ಇಡಲಾಗಿದ್ದ ಶೂನಲ್ಲಿ ಹಾವು ಕಂಡ ಆತಂಕಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಆರ್.ಎಂ.ಪಿ. ಬಡಾವಣೆಯ ಮಹೇಶ್ ಅವರು, ಮನೆಯ ಮುಂದೆ ಬಿಚ್ಚಿಟ್ಟಿದ್ದ ಶೂನಲ್ಲಿ ನಾಗರಹಾವು ಸೇರಿಕೊಂಡಿದೆ.

ಶೂ ಹಾಕಿಕೊಳ್ಳಲು ಅವರು ಕೈ ಹಾಕಿದಾಗ ಅದರಲ್ಲಿ ನಾಗರಹಾವು ಸೇರಿಕೊಂಡಿರುವುದು ಕಂಡು ಬಂದಿದ್ದು, ದಂಗಾದ ಅವರು ಹಿಂದೆ ಸರಿದಿದ್ದಾರೆ.

ಉರಗ ರಕ್ಷಕ ಕೆಂಪರಾಜು ಅವರಿಗೆ ಕರೆ ಮಾಡಲಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕೆಂಪರಾಜು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...