alex Certify
ಕನ್ನಡ ದುನಿಯಾ       Mobile App
       

Kannada Duniya

ಕಚ್ಚಿದ ಹಾವನ್ನು ಬಿಡಲೊಪ್ಪದೆ ಆತಂಕ ಸೃಷ್ಟಿಸಿದ್ದ ಮಹಿಳೆ

representational image 3689ತನಗೆ ಕಚ್ಚಿದ್ದ ವಿಷಪೂರಿತ ಹಾವನ್ನು ಹಿಡಿದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬಳು ಅದನ್ನು ಬಿಡಲು ಒಪ್ಪದೆ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ಲೀಲಾವತಿ ಎಂಬ ಮಹಿಳೆ ಸೌದೆ ತರಲು ಹೋದ ವೇಳೆ ಹಾವು ಕಚ್ಚಿದೆ. ಧೃತಿಗೆಡದ ಆಕೆ ಆ ಹಾವನ್ನು ಹಿಡಿದುಕೊಂಡು ಮನೆಗೆ ಬಂದಿದ್ದು, ಬಳಿಕ ಅಂಕೋಲಾದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಪತಿ ಜೊತೆ ಬಂದಿದ್ದಾಳೆ.

ಆಕೆಗೆ ಕಚ್ಚಿರುವುದು ವಿಷಪೂರಿತ ಹಾವಾಗಿದ್ದ ಕಾರಣ ಕೂಡಲೇ ಚುಚ್ಚುಮದ್ದು ನೀಡುವಂತೆ ವೈದ್ಯಾಧಿಕಾರಿಗಳು ನರ್ಸ್ ಗಳಿಗೆ ಸೂಚಿಸಿದ್ದಾರೆ. ಆದರೆ ಲೀಲಾವತಿ ಕೈನಲ್ಲಿ ವಿಷಪೂರಿತ ಹಾವಿದ್ದುದ್ದರಿಂದ ಚುಚ್ಚುಮದ್ದು ನೀಡಲು ನರ್ಸ್ ಗಳು ಹಿಂದೇಟು ಹಾಕಿದ್ದಾರೆ. ಹಾವನ್ನು ಬಿಡುವಂತೆ ಎಷ್ಟು ಹೇಳಿದರೂ ಲೀಲಾವತಿ ಅದಕ್ಕೆ ಸಿದ್ದವಾಗಿಲ್ಲ. ಕಡೆಗೆ ಪೊಲೀಸರನ್ನು ಕರೆಸಲಾಗಿದ್ದು, ಅವರು ಎಚ್ಚರಿಕೆ ನೀಡಿದ ಬಳಿಕ ಲೀಲಾವತಿ ಹಾವನ್ನು ಬಿಟ್ಟಿದ್ದಾಳೆ. ಆ ನಂತರವಷ್ಟೇ ಚುಚ್ಚುಮದ್ದು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...