alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವು ಕಚ್ಚಿ 5 ವರ್ಷದ ಬಾಲಕಿ ಸಾವು

snake-43

ಹಾವು ಕಚ್ಚಿದ ಪರಿಣಾಮ 5 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಂದಿದುರ್ಗ ರಸ್ತೆಯ ಎಂ.ಆರ್. ಪಾಳ್ಯದಲ್ಲಿ ನಡೆದಿದೆ.

ಎಂ.ಆರ್. ಪಾಳ್ಯದ ಸಹನಾ ಎಂಬ ಬಾಲಕಿ ಮನೆಯಲ್ಲಿ ಮಲಗಿದ್ದಾಗ ಪಕ್ಕದಲ್ಲಿದ್ದ ಖಾಲಿ ಜಾಗದಿಂದ ಮನೆ ಪ್ರವೇಶಿಸಿದ್ದ ಹಾವು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಚ್ಚಿದೆ. ಇದರಿಂದ ಬಾಲಕಿ ಕಿರುಚಿಕೊಂಡಿದ್ದು, ಎಚ್ಚರಗೊಂಡ ತಂದೆ ಪರೀಕ್ಷಿಸಿದ ವೇಳೆ ಬಾಲಕಿ ಬಾಯಲ್ಲಿ ನೊರೆ ಬರುತ್ತಿರುವುದು ಕಂಡು ಬಂದಿದೆ.

ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ವಿಷವೇರಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. ಪೋಷಕರು ಮನೆಗೆ ಬಂದು ಪರಿಶೀಲಿಸಿದ ವೇಳೆ ಹಾವು ಪತ್ತೆಯಾಗಿದ್ದು, ಅದನ್ನು ಕೊಂದು ಹಾಕಲಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...