alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯದಲ್ಲಿ ಕಂಡು ಬಂದಿದೆ ಈ ದೃಶ್ಯ

ಬೆಂಗಳೂರು: ಮನೆ ಹೊರಗೆ ಮಾತ್ರವಲ್ಲ, ಮನೆಯೊಳಗೆ ಶೌಚಾಲಯ ಸೇರಿ ವಿವಿಧೆಡೆ ಹಾವುಗಳು ಕಂಡು ಬಂದ ಅನೇಕ ಘಟನೆ ನಡೆದಿವೆ. ಹಾಗಾಗಿ ಹಾವುಗಳು ಇಲ್ಲದ ಸ್ಥಳವಿಲ್ಲ ಎನ್ನುತ್ತಾರೆ. ಈ ಮಾತಿಗೆ ಉದಾಹರಣೆಯಾಗಬಹುದಾದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಜೀವನ್ ಭೀಮಾನಗರದ ಕೇಂದ್ರೀಯ ವಿಶ್ವವಿದ್ಯಾಲಯದ ಶೌಚಾಲಯದಲ್ಲಿ ಶಿಕ್ಷಕರು ಬಳಸುವ ಟಾಯ್ಲೆಟ್ ನಲ್ಲಿ ಈ ದೃಶ್ಯ ಕಂಡವರು ಬೆಚ್ಚಿಬಿದ್ದಿದ್ದಾರೆ.

ಟಾಯ್ಲೆಟ್ ಕಮೋಡ್ ನಲ್ಲಿ ದೊಡ್ಡ ಗಾತ್ರದ ಹಾವೊಂದು ಕಂಡು ಬಂದಿದೆ. ಇದನ್ನು ನೋಡಿದವರು ಬಿ.ಬಿ.ಎಂ.ಪಿ. ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಸುಭಾಷ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...