alex Certify
ಕನ್ನಡ ದುನಿಯಾ       Mobile App
       

Kannada Duniya

ಆಟವಾಡುತ್ತ ಸುಣ್ಣದ ಡಬ್ಬಿ ನುಂಗಿದ್ದ ಮಗು ಸಾವು

ವಿಜಯಪುರ: ಆಟವಾಡುತ್ತಿದ್ದ ಒಂಭತ್ತು ತಿಂಗಳ ಮಗುವೊಂದು ಸುಣ್ಣದ ಡಬ್ಬಿಯನ್ನು ನುಂಗಿ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ತಿಕೋಟಾ ಪಟ್ಟಣದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶ್ವನಾಥ ತಾಳಿಕೋಟಿ ಎಂಬುವರ ಪುತ್ರ ಮಲ್ಲು, ಮೃತ ಮಗು.

ಸುಣ್ಣದ ಡಬ್ಬಿ ಜತೆ ಆಟವಾಡುತ್ತಿದ್ದ ಮಗು, ಆಕಸ್ಮಿಕವಾಗಿ ಸುಣ್ಣದ ಡಬ್ಬಿ ನುಂಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಸುಣ್ಣದ ಡಬ್ಬಿ ತೆಗೆಸಲಾಗಿತ್ತು. ಅಷ್ಟರಲ್ಲಿ ಬಹುಪಾಲು ಸುಣ್ಣ ಮಗುವಿನ ದೇಹ ಸೇರಿದ್ದರಿಂದ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...