alex Certify
ಕನ್ನಡ ದುನಿಯಾ       Mobile App
       

Kannada Duniya

ವಿಲಕ್ಷಣ ಘಟನೆ ! ತಂಗಿಯ ಮಗುವಿಗೆ ಅಣ್ಣನೇ ತಂದೆ..!!

aattp-rape-victims-

‘ಕಾಮಾತುರಂ ನಾ ಭಯ ನ ಲಜ್ಜ’ ಕಾಮದ ಮದ ಏರಿದವನಿಗೆ ಭಯ, ನಾಚಿಕೆ ಇರಲ್ಲ ಅಂತಾರೆ. ಈ ಪ್ರಕರಣವನ್ನು ನೋಡಿದರೆ, ಅದು ನಿಜ ಎನಿಸುತ್ತದೆ. ತಂಗಿಯ ಮೇಲೆಯೇ ದುರುಳ ಸಹೋದರನೊಬ್ಬ ಅತ್ಯಾಚಾರ ಎಸಗಿದ ವಿಲಕ್ಷಣ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮಾಸ್ತಿ ಸಮೀಪದ ಶ್ಯಾಮಶೆಟ್ಟಿಹಳ್ಳಿಯ ಯುವಕನೊಬ್ಬ ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ತನ್ನ ಚಿಕ್ಕಮ್ಮನ ಮಗಳ ಮೇಲೆಯೇ ಆತ ಅತ್ಯಾಚಾರ ಎಸಗಿದ್ದು, ಇದರ ಪರಿಣಾಮ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಯುವತಿ ಪಿಯುಸಿ ವರೆಗೂ ಓದಿ ಮನೆಯಲ್ಲಿದ್ದಳು. 2015 ರ ಆಗಸ್ಟ್ ನಲ್ಲಿ ಯುವತಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದಾದ ನಂತರ ಕಳೆದ ಫೆಬ್ರವರಿ 13ರಂದು ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಆಕೆ 7 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಆಕೆಗೆ ಮಾರನೇ ದಿನ ಹೆರಿಗೆಯಾಗಿದ್ದು, ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಒಂದು ದಿನದ ನಂತರ ಮಗು ಮೃತಪಟ್ಟಿದೆ. ಯುವತಿ ಮಾಸ್ತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...