alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಸ್ತಾ ಹತ್ಯೆ ಪ್ರಕರಣ : ಬೂದಿ ಮುಚ್ಚಿದ ಕೆಂಡದಂತಿದೆ ಉದ್ವಿಗ್ನಗೊಂಡಿದ್ದ ಶಿರಸಿ

ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರೆ ನೀಡಲಾಗಿದ್ದ ಶಿರಸಿ ಬಂದ್ ಉದ್ವಿಗ್ನಗೊಂಡಿತ್ತು. ಪ್ರತಿಭಟನಾಕಾರರು ಬಸ್ ಗೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ್ದರು. ಸದ್ಯ ಶಿರಸಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಬಿಗಿ ಭದ್ರತೆ ಒದಗಿಸಲಾಗಿದೆ. ಶಿರಸಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಮನೆಯಿಂದ ಹೊರ ಬರಲು ಸಾರ್ವಜನಿಕರು ಭಯಪಡುವಂತಾಗಿದೆ.

ಕುಮುಟಾ ಘಟನೆ ನಂತ್ರವೂ ಎಚ್ಚರಗೊಳ್ಳದ ಪೊಲೀಸರ ವೈಫಲ್ಯವೇ ಶಿರಸಿ ಗಲಭೆಗೆ ಕಾರಣ ಎನ್ನಲಾಗ್ತಿದೆ. ಶಾಂತ ರೀತಿಯಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಪೊಲೀಸರು ಅಡ್ಡಿಯುಂಟು ಮಾಡಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಹಿಂಸೆಗಿಳಿದಿದ್ದಾರೆ. ನಂತ್ರ ಎಚ್ಚೆತ್ತ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಎಂದೂ ನೋಡದ ರಣರಂಗವನ್ನು ನೋಡಿರುವ ಶಿರಸಿ ಜನರು ಭಯಗೊಂಡಿದ್ದಾರೆ.

ಈ ಮಧ್ಯೆ ಭಟ್ಕಳದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ತಲ್ವಾರ್ ಹಾಗೂ ಎರಡು ಗನ್ ವಶಕ್ಕೆ ಪಡೆಯಲಾಗಿದೆ. ಆದ್ರೆ ಬಂಧಿತರು ಯಾರೆಂಬ ಬಗ್ಗೆ ಪೊಲೀಸ್ ಮಾಹಿತಿ ನೀಡಿಲ್ಲ.

ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯಬೇಕೆಂದು ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ. ಕೋಮು ಗಲಭೆಗೆ ತಿರುಗುತ್ತಿರುವ ಉತ್ತರ ಕನ್ನಡದ ಪ್ರತಿಭಟನೆ ಬಗ್ಗೆ ರಾಜಕೀಯ ನಾಯಕರ ಹಗ್ಗಜಗ್ಗಾಟ ಮುಂದುವರೆದಿದೆ.

ಸಣ್ಣ ಘಟನೆಯನ್ನು ದೊಡ್ಡ ಗಲಭೆ ರೂಪಕ್ಕೆ ಪರಿವರ್ತನೆ ಮಾಡಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇತ್ತ ಬಿಜೆಪಿ ನಾಯಕರು ಹಾಗೂ ಸಿಎಂ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ, ಪ್ರತ್ಯಾರೋಪದ ಮಾತುಗಳನ್ನಾಡಿದ್ದಾರೆ.

ಮೇಸ್ತಾ ಪ್ರಕರಣದಿಂದ ಐದನೇ ದಿನವೂ ಶಾಲಾ ಕಾಲೇಜು ಬಂದ್ ಆಗಿದ್ದು, ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...