alex Certify
ಕನ್ನಡ ದುನಿಯಾ       Mobile App
       

Kannada Duniya

ಸರಳ ವಿವಾಹಕ್ಕೆ ನನ್ನ ಆದ್ಯತೆ ಎಂದ ಯದುವೀರ್

yadu

ಸರಳ ವಿವಾಹಕ್ಕೆ ನಾನು ಆದ್ಯತೆ ನೀಡುತ್ತೇನೆ. ಆದರೆ ವಿವಾಹ ಹೇಗೆ ನಡೆಯಬೇಕು ಎಂಬುದನ್ನು ತಾಯಿ ಪ್ರಮೋದಾದೇವಿ ಒಡೆಯರ್ ಮತ್ತು ಧರ್ಮಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ರಾಜಮನೆತನದ ಅರಸ ಯದುವೀರ್ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಜೂನ್ 27 ಮತ್ತು 28 ಕ್ಕೆ ನಿಗದಿಯಾಗಿದ್ದು, ಈ ಸಂದರ್ಭದಲ್ಲಿ ತಮ್ಮ ವಿವಾಹ ಸಮಾರಂಭದ ಕುರಿತು ಮಾತನಾಡಿದ ಅವರು, ಸರಳ ವಿವಾಹವಾಗುವುದು ತಮಗಿಷ್ಟ ಎಂದರಲ್ಲದೇ ಆರತಕ್ಷತೆ ಮತ್ತು ವಿವಾಹ ಮೈಸೂರಿನಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನು ರಾಜಸ್ತಾನದ ದುಂಗಾರ್ಪುರ ರಾಜಮನೆತನದ ರಾಜಕುಮಾರಿ ತ್ರಿಷಿಕಾ ಮತ್ತು ಯದುವೀರ್ ವಿವಾಹಕ್ಕೆ ಮೈಸೂರಿನ ಅಂಬಾ ವಿಲಾಸ ಅರಮನೆ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ಅರಮನೆಯ ಒಳಭಾಗದಲ್ಲಿರುವ ಗಣೇಶ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಅರಮನೆ ಪೂಜಾರಿಗಳೇ ವಿವಾಹದ ಎಲ್ಲಾ ವಿಧಿವಿಧಾನಗಳನ್ನ ನೇರವೇರಿಸಲಿದ್ದಾರೆ. ಸಂಪ್ರದಾಯಬದ್ಧ ವಿವಾಹಕ್ಕೆ ಮೈಸೂರು ಅರಮನೆ ಸಾಕ್ಷಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...