alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ಧರಾಮಯ್ಯ ಮೇಲೆ ನಕಲಿ ‘ಬಾಂಬ್’ ಎಸೆದವನ ಅರೆಸ್ಟ್

Siddaramai mn 22

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದೆ. ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಅವರು ಮಾತನಾಡುವಾಗ ಬಾಲ್ಕನಿಯಲ್ಲಿದ್ದ ವ್ಯಕ್ತಿಯೊಬ್ಬ ಅವರತ್ತ ಕವರ್ ಎಸೆದು ಬಾಂಬ್ ಇದೆ ಎಂದು ಕೂಗಿದ್ದಾನೆ. ಇದರಿಂದ ಕೆಲ ಕಾಲ ಗೊಂದಲದ ವಾತಾವರಣವೂ ಏರ್ಪಟ್ಟಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸಿದ್ಧರಾಮಯ್ಯ ಮಾತನಾಡುವಾಗ ಬಾಲ್ಕನಿಯಲ್ಲಿದ್ದ ಅಪರಿಚಿತ ವ್ಯಕ್ತಿ, ನಮ್ಮ ಸವಿತಾ ಸಮಾಜಕ್ಕೆ ನೀವೇನೂ ಮಾಡಿಲ್ಲ ಎಂದು ಕೂಗಾಡಿದ್ದಾನೆ. ಆಗ ಸಿಎಂ, ಸಮಾಧಾನದಿಂದಲೇ ಯಾವುದಪ್ಪ ನಿಮ್ಮ ಸಮಾಜ ಎಂದು ಪ್ರಶ್ನಿಸಿದ್ದಾರೆ. ಪಾನಮತ್ತನಾಗಿದ್ದ ವ್ಯಕ್ತಿ ಒಂದೇ ಸಮನೆ ಕೂಗಾಡುತ್ತಾ, ನೀವು ಸವಿತಾ ಸಮಾಜವನ್ನು ಕಡೆಗಣಿಸಿದ್ದೀರಿ, ಏನು ಮಾಡುತ್ತೇನೆ ನೋಡಿ ಎಂದು ಕೈಯಲ್ಲಿದ್ದ ಕವರ್ ಒಂದನ್ನು ಎಸೆದು ಇದರಲ್ಲಿ ಬಾಂಬ್ ಇದೆ ಎಂದು ಕೂಗಿದ್ದಾನೆ. ವೇದಿಕೆಯ ಸಮೀಪವೇ ಕವರ್ ಬಿದ್ದಿದೆ.

ಕೂಡಲೇ, ಪೊಲೀಸರು ಮುಖ್ಯಮಂತ್ರಿಯವರನ್ನು ಸುತ್ತುವರೆದಿದ್ದಾರೆ. ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಚಾಕೊಲೇಟ್ ಇರುವುದು ಗೊತ್ತಾಗಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬಿ. ಹೆಚ್. ಪ್ರಸಾದ್ ಎಂದು ಹೇಳಿದ್ದಾನೆ. ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಿಂದಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...