alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಯೋಗಿ ಕಾಲೆಳೆದ ಸಿಎಂ ಸಿದ್ದರಾಮಯ್ಯ

ಉತ್ತರ ಪ್ರದೇಶ ಉಪ ಚುನಾವಣೆ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಫಲಿತಾಂಶ ಮುಖಭಂಗವನ್ನುಂಟು ಮಾಡಿದೆ. ಪ್ರತಿಷ್ಠೆಯ ಕಣದಲ್ಲಿಯೇ ಬಿಜೆಪಿ ಸೋತು ಸುಣ್ಣವಾಗಿದೆ. ಉಪ ಚುನಾವಣೆ ಸೋಲಿನಿಂದ ಯೋಗಿ ಆದಿತ್ಯನಾಥ್ ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಾರೆ.

ಕೇವಲ ಉತ್ತರ ಪ್ರದೇಶವೊಂದೇ ಅಲ್ಲ ಕರ್ನಾಟಕ ಕೂಡ ಉಪ ಚುನಾವಣೆ ಫಲಿತಾಂಶವನ್ನು ಕುತೂಹಲದಿಂದ ವೀಕ್ಷಣೆ ಮಾಡಿದೆ. ಫಲಿತಾಂಶ ಬರ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಟ್ವೀಟರ್ ಮೂಲಕ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಯೋಗಿ ಆದಿತ್ಯನಾಥ್ ಕಾಲೆಳೆದಿದ್ದಾರೆ.

ಕರ್ನಾಟಕ ಚುನಾವಣೆ ಹತ್ತಿರ ಬರ್ತಿದೆ. ಕಾಂಗ್ರೆಸ್, ಬಿಜೆಪಿ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿಎಂ ಯೋಗಿ ಹೆಸರಿದೆ. ಈಗಾಗಲೇ ಪ್ರಚಾರ ನಡೆಸಿರುವ ಯೋಗಿ ಬಂದಾಗೆಲ್ಲ ಆಡಳಿತ ಪಕ್ಷ ಕಾಂಗ್ರೆಸ್ ದೂರಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಈಗ ತಕ್ಕ ಉತ್ತರ ನೀಡಿದ್ದಾರೆ.

ಉಪ ಚುನಾವಣೆ ಸೋಲು ಬಿಜೆಪಿಗೆ ಅವಮಾನ. ಐತಿಹಾಸಿಕ ಗೆಲುವು ಕಂಡ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಕ್ಕೆ ಅಭಿನಂದನೆ. ಬಿಜೆಪಿ ನಾಯಕರ ಏಕತೆಯೇ ಅವರ ಸೋಲಿಗೆ ಕಾರಣವಾಗಿದೆ ಎಂದ ಸಿಎಂ, ಬಹುಶಃ ಇನ್ಮುಂದೆ ಯೋಗಿ ಆದಿತ್ಯನಾಥ್ ಕರ್ನಾಟಕದಲ್ಲಿ ಅಭಿವೃದ್ಧಿ ಬಗ್ಗೆ ಉಪನ್ಯಾಸ ನೀಡಿ ತಮ್ಮ ಸಮಯ ಹಾಳು ಮಾಡುವುದಿಲ್ಲ ಎನ್ನಿಸುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...