alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ದುಬಾರಿ ವಾಚ್ ಸರ್ಕಾರದ ವಶಕ್ಕೆ

sidd watch

ರಾಜ್ಯದಲ್ಲಿ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಸದನದಲ್ಲಿ ಕಲಾಪವನ್ನೇ ಬಲಿ ಪಡೆದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ಇದರ ನಡುವೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದುಬಾರಿ ವಾಚ್ ಅನ್ನು ಸದನದಲ್ಲಿಯೇ ಸ್ಪೀಕರ್ ಅವರಿಗೆ ಒಪ್ಪಿಸಿದರು. ಈ ವಾಚ್ ಉಡುಗೊರೆಯಾಗಿದ್ದಕ್ಕೆ ತೆರಿಗೆಯನ್ನು ಕಟ್ಟಿದ್ದೇನೆ. ಇನ್ನು ಮುಂದೆ ಇದನ್ನು ಸರ್ಕಾರಕ್ಕೆ ಒಪ್ಪಿಸುತ್ತಿದ್ದೇನೆ ಎಂದು ಹೇಳಿದರು. ಸಿಎಂ ಕೊಟ್ಟ ವಾಚ್ ಪಡೆದ ಸ್ಪೀಕರ್ ಅದನ್ನು ಮುಖ್ಯಕಾರ್ಯದರ್ಶಿಯವರಿಗೆ ಒಪ್ಪಿಸಿ ಇನ್ನುಮುಂದೆ ಇದು ಸರ್ಕಾರಕ್ಕೆ ಸೇರಿದೆ ಎಂದು ಹೇಳಿದರಾದರೂ ಪ್ರತಿಪಕ್ಷಗಳ ಮುಖಂಡರು ಪ್ರತಿಭಟನೆ ಮುಂದುವರೆಸಿದರು.

ಸರ್ಕಾರದೊಂದಿಗೆ ಉಡುಗೊರೆ ಕೊಟ್ಟವರಿಗೆ ಯಾವ ರೀತಿಯ ಸಂಬಂಧ ಇದೆ ಎಂಬುದು ಗೊತ್ತಾಗಬೇಕು. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು. ಇದರಿಂದ ಸದನದಲ್ಲಿ ಗೊಂದಲ ಉಂಟಾಗಿ ಸ್ಪೀಕರ್ ಸದನವನ್ನು ಮುಂದೂಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...