alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಮ ದರ್ಶನದ ವೇಳೆ ಕಣ್ಣೀರಿಟ್ಟ ಸಿದ್ದರಾಮಯ್ಯ

siddaramaiah 33848849ಬೆಲ್ಜಿಯಂ ನಲ್ಲಿ ವಿಧಿವಶರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯನವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮೈಸೂರಿನ ವಸ್ತು ಪ್ರದರ್ಶನ ಮೈದಾನಲ್ಲಿ ಮಾಡುತ್ತಿದ್ದ ವೇಳೆ ದುಃಖತಪ್ತರಾದ ಸಿದ್ದರಾಮಯ್ಯ ಕಣ್ಣೀರಿಟ್ಟಿದ್ದಾರೆ.

ಮಗನ ಪಾರ್ಥಿವ ಶರೀರದ ಮುಂದೆಯೇ ನಿಂತಿದ್ದ ಸಿದ್ದರಾಮಯ್ಯನವರನ್ನು ಗಣ್ಯರು ಸಂತೈಸುವ ಸಂದರ್ಭದಲ್ಲಿ ಭಾವುಕರಾದ ಅವರು ಕಣ್ಣೀರು ಹಾಕಿದ್ದಾರೆ. ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೂ ಸಾರ್ವಜನಿಕರಿಗೆ ನಮಸ್ಕರಿಸಿದ ಸಿದ್ದರಾಮಯ್ಯನವರು, ನೋವಿನ ಗಳಿಗೆಯಲ್ಲಿ ತಮಗೆ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಗಣ್ಯರು, ಸಾರ್ವಜನಿಕರು ರಾಕೇಶ್ ಸಿದ್ದರಾಮಯ್ಯನವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಹಲವಾರು ಮಂದಿ ಕಣ್ಣೀರಿಟ್ಟಿದ್ದಾರೆ. ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದರೂ ನೂಕುನುಗ್ಗಲು ಉಂಟಾದ ಘಟನೆಯೂ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...