alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂಗೆ ಮತ್ತೊಂದು ಪತ್ರ ಬರೆದ ಸಿದ್ದರಾಮಯ್ಯ

ಚಿತ್ರನಗರಿಯನ್ನು ಮೈಸೂರಿನಿಂದ ರಾಮನಗರಕ್ಕೆ ವರ್ಗಾಯಿಸಿರುವುದಕ್ಕೆ ಮೈತ್ರಿಕೂಟ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಗಾದೆ ತೆಗೆದಿದ್ದಾರೆ.

ಈ ಸಂಬಂದ ಸಿಎಂಗೆ ಪತ್ರ ಬರೆದಿರುವ ಸಿದ್ದಾರಾಮಯ್ಯ ತಮ್ಮ ಆಕ್ಷೇಪ ಹೊರಹಾಕಿದ್ದಾರೆ. ಮೈಸೂರಲ್ಲೇ ಚಿತ್ರ ನಗರಿ ಆಗಬೇಕೆಂಬುದು ಮೇರು ನಟ ರಾಜಕುಮಾರ್ ಅವರ ಆಶಯವಾಗಿತ್ತು. ಇದನ್ನು ಮನಗಂಡು ಕಾಂಗ್ರೆಸ್ ಸರ್ಕಾರ, ಮೈಸೂರಲ್ಲೇ ಚಿತ್ರ ನಗರಿ ಸ್ಥಾಪಿಸಲು ಮುಂದಾಗಿತ್ತು, ಅಲ್ಲದೇ ಇದಕ್ಕಾಗಿ ನೂರು ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ಬಜೆಟ್ ನಲ್ಲಿ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿ ಘೋಷಣೆ ಮಾಡಲಾಗಿದೆ. ಇದೀಗ ನಿರ್ಧಾರ ಪುನರ್ ಪರಿಶೀಲಿಸುವಂತೆ ಪತ್ರದಲ್ಲಿ ಒತ್ತಾಯಿಸಿರುವ ಸಿದ್ದರಾಮಯ್ಯನವರು, ಈ ಹಿಂದೆ ತೀರ್ಮಾನಿಸಿದಂತೆ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...