alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ಪ್ರಬಲ ಕೋಮುಗಳ ಜಿದ್ದಾಜಿದ್ದಿಗೆ ಕಾರಣವಾಗುತ್ತಾ ರಾಜ್ಯ ರಾಜಕಾರಣ…?

ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಆದರೆ ಆರಂಭದಿಂದಲೇ ಹಲವು ಎಡರುತೊಡರುಗಳನ್ನು ಎದುರಿಸುತ್ತಾ ಬಂದಿರುವ ಈ ಸರ್ಕಾರ ಈಗ ಎರಡು ಪ್ರಬಲ ಕೋಮುಗಳ ಜಿದ್ದಾಜಿದ್ದಿಗೆ ಕಾರಣವಾಗುತ್ತಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಬಜೆಟ್ ಮಂಡನೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಡುವೆ ಆರಂಭವಾದ ಪೈಪೋಟಿ ಈಗ ಕುರುಬ ಹಾಗೂ ಒಕ್ಕಲಿಗ ಸ್ವಾಮೀಜಿಗಳ ಪ್ರವೇಶದಿಂದಾಗಿ ಮತ್ತೊಂದು ತಿರುವು ಪಡೆದುಕೊಂಡಿದೆ.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಒಕ್ಕಲಿಗ ಮಠದ ಸ್ವಾಮೀಜಿ ನಂಜಾವದೂತರು ಕುಮಾರಸ್ವಾಮಿಯವರ ಸರ್ಕಾರಕ್ಕೆ ಯಾರಾದರೂ ತೊಂದರೆ ಕೊಡಲು ಮುಂದಾದರೆ ಸಮುದಾಯ ಒಗ್ಗೂಡಬೇಕಾಗುತ್ತದೆ ಎಂದಿದ್ದರು.

ಇದೀಗ ಕುರುಬ ಸಮಾಜದ ನಿರಂಜನಾನಂದಪುರಿ ಸ್ವಾಮೀಜಿ, ಮೈತ್ರಿಕೂಟ ಸರ್ಕಾರದಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಈ ಕಾರ್ಯವನ್ನು ಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ನಡುವಿನ ಪೈಪೋಟಿ ಮಧ್ಯೆ ಒಕ್ಕಲಿಗ ಹಾಗೂ ಕುರುಬ ಸ್ವಾಮೀಜಿಗಳ ಪ್ರವೇಶವಾಗುವುದರ ಮೂಲಕ ರಾಜ್ಯ ರಾಜಕಾರಣ ಮತ್ತೊಂದು ಮಜಲನ್ನು ಪಡೆಯುತ್ತಾದಾ ಎಂಬ ಅನುಮಾನ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...