alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಿಎಂ ಸಿದ್ದುಗಿಲ್ಲ ಸಂಪುಟ ದರ್ಜೆ ಸ್ಥಾನಮಾನ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುತ್ತದೆಂದು ಹೇಳಲಾಗಿತ್ತಾದರೂ ಈಗ ಅದಕ್ಕೆ ತಡೆ ಬೀಳುವ ಸಾಧ್ಯತೆ ಇದೆ.

ಸಿದ್ದರಾಮಯ್ಯನವರಿಗೆ ಈ ಸ್ಥಾನ ನೀಡಿದರೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಬಹುದೆಂಬುದರ ಜೊತೆಗೆ ಲಾಭದಾಯಕ ಹುದ್ದೆ ಕಾಯ್ದೆ ಅಡ್ಡಿಯಾಗುವ ಭೀತಿಯೂ ಎದುರಾಗುತ್ತದೆ. ಒಂದೊಮ್ಮೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಸಿದ್ದರಾಮಯ್ಯನವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದರ್ಭವೂ ಒದಗಿ ಬರಬಹುದು ಎಂಬ ಕಾರಣಕ್ಕೆ ಸಂಪುಟ ದರ್ಜೆ ಸ್ಥಾನಮಾನ ನೀಡುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.

ಸಿದ್ದರಾಮಯ್ಯನವರಿಗೆ ಸಂಪುಟದರ್ಜೆ ಸ್ಥಾನಮಾನದ ಜೊತೆಗೆ ‘ಕಾವೇರಿ’ ನಿವಾಸವೂ ಕೈ ತಪ್ಪುವ ಸಾಧ್ಯತೆ ಇದೆ. ಕಾವೇರಿ ನಿವಾಸವನ್ನು ತಮಗೆ ಮಂಜೂರು ಮಾಡಲು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಬೇಡಿಕೆ ಇಟ್ಟಿದ್ದು, ಸಿದ್ದರಾಮಯ್ಯ ಕಾವೇರಿ ನಿವಾಸವನ್ನು ಇನ್ನೂ ತೆರವುಗೊಳಿಸದ ಕಾರಣ ಸದ್ಯಕ್ಕೆ ಯಾರಿಗೂ ಹಂಚಿಕೆ ಮಾಡುವ ಗೋಜಿಗೆ ಹೋಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...