alex Certify
ಕನ್ನಡ ದುನಿಯಾ       Mobile App
       

Kannada Duniya

ನನ್ನ ಇಮೇಜ್ ಹಾಳು ಮಾಡಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದ ಸಿಎಂ

sep1401siddaramaih1

ತಮ್ಮ ಹಾಗೂ ಸರ್ಕಾರದ ಇಮೇಜ್ ಹಾಳು ಮಾಡುವ ದೃಷ್ಟಿಯಿಂದ ಕುಮಾರಸ್ವಾಮಿ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅವರ ಹೊಟ್ಟೆಕಿಚ್ಚಿನ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿರುವುದು ಕದ್ದ ವಾಚ್ ಇರಬಹುದು ಎಂದಿದ್ದ ಕುಮಾರಸ್ವಾಮಿ, ಮೈಸೂರಿನಲ್ಲಿ ಬೆಳ್ಳಿ ತಟ್ಟೆಯಲ್ಲಿ ಸಿದ್ಧರಾಮಯ್ಯ ಊಟ ಮಾಡುತ್ತಾರೆಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಗರಂ ಆಗಿಯೇ ಉತ್ತರಿಸಿದ ಸಿದ್ದರಾಮಯ್ಯ ನನ್ನ ಹಾಗೂ ಸರಕಾರದ ವಿರುದ್ದ ಕುಮಾರಸ್ವಾಮಿ ದುರುದ್ದೇಶದಿಂದ ಹುರುಳಿಲ್ಲದ ಆರೋಪಗಳನ್ನು ಮಾಡುತ್ತಿದ್ದು, ಅವರ ಮಾತಿನಲ್ಲೇ ಅವರು ಹೇಳುತ್ತಿರುವುದು ಸುಳ್ಳೆಂದು ತಿಳಿಯುತ್ತದೆ. ಕಂಪ್ಲೇಟ್ ಕೊಟ್ಟ ಸುಧಾಕರ್ ಅವರು ಒಂದು ರೀತಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಕಂಪ್ಲೇಂಟ್ ಕೊಟ್ಟವರೇ ನನ್ನ ವಾಚಿಗೂ, ಅವರು ಕಳೆದುಕೊಂಡ ವಾಚ್ ಗೂ ಸಂಬಂಧ ಇಲ್ಲ ಎಂದಿರುವಾಗ ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುವುದು ತರವಲ್ಲ ಎಂದು ತಿಳಿಸಿದರು.

ಅಲ್ಲದೇ ನಾನು ಮುಖ್ಯಮಂತ್ರಿ ಆಗಿರುವುದು ಸಹಿಸಲಾಗದ ಕುಮಾರಸ್ವಾಮಿ ಈ ರೀತಿ ಆರೋಪ ಮಾಡುತ್ತಿದ್ದು, ಇದೇ ರೀತಿ ಬೇರೆಯವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲೂ ಹೇಳಿಕೆಗಳನ್ನು ನೀಡಿ ಕೆಲಸ ಮಾಡಲು ಬಿಟ್ಟಿರಲಿಲ್ಲ. ಈಗ ನಾನು ಮುಖ್ಯಮಂತ್ರಿಯಾಗಿರುವುದು ಅವರಿಂದ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...