alex Certify
ಕನ್ನಡ ದುನಿಯಾ       Mobile App
       

Kannada Duniya

ನಾಡಗೀತೆ ಹಾಡದ್ದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ

siddaramaiah-123ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಎಂಎಸ್ಐಎಲ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಆರಂಭಕ್ಕೂ ಮುನ್ನ ನಾಡಗೀತೆ ಹಾಡದಿದ್ದಕ್ಕೆ ಗರಂ ಆದ ಘಟನೆ ನಡೆದಿದೆ.

ನಾಡಗೀತೆ ಬದಲು ನಿತ್ಯೋತ್ಸವ ಗೀತೆಯನ್ನು ಗಾಯಕರು ಹಾಡಿದ್ದು, ಹಾಡು ಮುಗಿದ ಬಳಿಕ ಕಾರ್ಯಕ್ರಮ ಆಯೋಜಕರನ್ನು ಕರೆಸಿಕೊಂಡ ಸಿದ್ದರಾಮಯ್ಯ ನಾಡಗೀತೆ ಹಾಡದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಕಾರ್ಯಕ್ರಮದ ನಿರೂಪಕಿಗೆ ಏನಮ್ಮ ಇದೆಲ್ಲಾ ಎಂದ ಮುಖ್ಯಮಂತ್ರಿಗಳು, ನಾಡಗೀತೆಯನ್ನು ಹಾಡುವಂತೆ ಸೂಚಿಸಿದ್ದಾರೆ. ಪೂರ್ವಸಿದ್ದತೆ ಇಲ್ಲದೆ ಬಂದಿದ್ದ ಗಾಯಕರು ಹೇಗೋ ನಾಡಗೀತೆಯನ್ನು ಹಾಡಿದ್ದಾರೆ.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾಸಗೀಕರಣ, ಜಾಗತೀಕರಣದಲ್ಲೂ ಎಂಎಸ್ಐಎಲ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದಕ್ಕೆ ಶ್ಲಾಘಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...