alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯನವರಿಗಾಗಿ ಬಾದಾಮಿಯಲ್ಲಿ ಸಿದ್ದವಾಗ್ತಿದೆ ಸುಸಜ್ಜಿತ ಮನೆ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ತಮಗೆ ಹೊಸ ಜೀವನ ತಂದುಕೊಟ್ಟ ಬಾದಾಮಿ ಜನತೆ ಸಂಕಷ್ಟ ಪರಿಹರಿಸಲು ಜಿಲ್ಲೆಯಲ್ಲೇ ವಾಸ್ತವ್ಯಕ್ಕೆ ಮುಂದಾಗಿದ್ದು, ಸಿದ್ದರಾಮಯ್ಯನವರಿಗಾಗಿ ವಸತಿ ಗೃಹವೊಂದರ ನವೀಕರಣ ಕಾರ್ಯ ಭರದಿಂದ ಸಾಗಿದೆ.

ಬಾದಾಮಿ ಜನರ ಋಣ ತೀರಿಲು ಇಲ್ಲೇ ವಾಸಮಾಡುವುದಾಗಿ ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಯಾವುದೇ ಬಾಡಿಗೆ ಮನೆಯೂ ಇಷ್ಟವಾಗಿರಲಿಲ್ಲ. ಸ್ಥಳೀಯ ಕಾಂಗ್ರೆಸ್ ನಾಯಕರು ಹಲವು ಮನೆಗಳನ್ನು ತೋರಿಸಿದರಾದರೂ ಸಿದ್ದರಾಮಯ್ಯ ಯಾವುದನ್ನೂ ಒಪ್ಪಿರಲಿಲ್ಲ. ಈಗ ಅಂತಿಮವಾಗಿ ಬಾಗಲಕೋಟೆ ಪಟ್ಟಣದಲ್ಲಿರುವ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಇರಲು ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇದೀಗ ವಸತಿ ಗೃಹದಲ್ಲಿ 20 ಲಕ್ಷ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ಸಿದ್ದರಾಮಯ್ಯನವರು ಸೂಚಿಸಿದಂತೆ ಕೊಠಡಿ, ಹೈಟೆಕ್ ಬೆಡ್‍ ರೂಂ ವಿತ್ ಅಟ್ಯಾಚ್ ಬಾತ್‍ರೂಂ, ವೆಸ್ಟರ್ನ್ ಶೌಚಾಲಯ, ಕಛೇರಿ ಎಲ್ಲವನ್ನೂ ನವೀಕರಣ ಮಾಡಲಾಗುತ್ತಿದೆ.

ಇನ್ನೊಂದು ತಿಂಗಳಲ್ಲಿ ಮನೆ ನವೀಕರಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಜಿಲ್ಲೆಯ ಜನರು ಸಿದ್ದರಾಮಯ್ಯನವರ ಬಳಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...