alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎಂ. ಸೊಸೆ ಮನೆ ಮೇಲೆ ದಾಳಿ

cm-sose-sd

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೊಸೆ ಮನೆ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದು, ಮಲ್ಲೇಶ್ವರಂ ಠಾಣೆಗೆ ದೂರು ನೀಡಲಾಗಿದೆ.

ರಾಕೇಶ್ ಸಿದ್ದರಾಮಯ್ಯ ಅವರ ಪತ್ನಿ ಸ್ಮಿತಾ, ಮಲ್ಲೇಶ್ವರಂ 18 ನೇ ಕ್ರಾಸ್, 9 ನೇ ಮೇನ್ ನಲ್ಲಿ ವಾಸವಾಗಿದ್ದು, ಕಿಡಿಗೇಡಿಗಳು ಅವರ ಮನೆಯ ಲೈಟ್ ಹಾಳು ಮಾಡಿದ್ದಾರೆ. ಮರದಲ್ಲಿದ್ದ ಹಲಸಿನ ಕಾಯಿ ಕಿತ್ತು ಹಾಕಿದ್ದಾರೆ ಎನ್ನಲಾಗಿದೆ.

ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿವೆ. ಇದು ಕಳ್ಳರ ಕೃತ್ಯವಾಗಿರಲಾರದು. ತಾಯಿ, ಮಕ್ಕಳೊಂದಿಗೆ ವಾಸವಾಗಿರುವ ತಮಗೆ ರಕ್ಷಣೆ ನೀಡಬೇಕೆಂದು ಸ್ಮಿತಾ ರಾಕೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರು ಈಗಾಗಲೇ ಕ್ರಮಕೈಗೊಂಡಿದ್ದು, ಸ್ಮಿತಾ ಅವರ ಮನೆಗೆ ಭದ್ರತೆ ಒದಗಿಸಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...