alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಲ್ಲಾಡ್ಸ್’ ಹಾಡಿಗೆ ಡಾನ್ಸ್ ಮಾಡಿದ್ರಾ ಸಿಎಂ…? ಇಲ್ಲಿದೆ ಸತ್ಯ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚಿನ ಜನಪ್ರಿಯ ಸಾಂಗ್ ‘ಅಲ್ಲಾಡ್ಸ್ ….’ ಹಾಡಿಗೆ ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಇದೊಂದು ಕಡಿಮೆ ಇತ್ತು ನಮ್ಮ ಸಿ.ಎಂ.ಗೆ’ ಎಂದು ವ್ಯಕ್ತಿಯೊಬ್ಬರು ಈ ಡ್ಯಾನ್ಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ಸಿ.ಎಂ. ಸಿದ್ಧರಾಮಯ್ಯ ಅಲ್ಲ. ಅವರನ್ನೇ ಹೋಲುವ ರೀತಿಯಲ್ಲಿ ಡ್ರೆಸ್ ಧರಿಸಿದ್ದ ರೈತರೊಬ್ಬರು ಮಾಡಿದ ಡ್ಯಾನ್ಸ್ ಅದಾಗಿದೆ. ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ರೈತ ಡ್ಯಾನ್ಸ್ ಮಾಡಿದ್ದು, ಅದನ್ನು ಫೇಸ್ ಬುಕ್ ಲೈವ್ ಮಾಡಲಾಗಿದೆ. ಅದೇ ವಿಡಿಯೋ ಬಳಸಿಕೊಂಡು ಸಿದ್ಧರಾಮಯ್ಯ ಡ್ಯಾನ್ಸ್ ಮಾಡಿದ್ದಾರೆ ಎಂದು ಅಪಪ್ರಚಾರ ನಡೆಸಲಾಗ್ತಿದೆ.

ಕಾರ್ಯಾಗಾರದಲ್ಲಿ ರೈತ ಜೀವನೋತ್ಸಾಹದಿಂದ ಕುಣಿದಾಡಿದ್ದ ವಿಡಿಯೋ ಬಳಸಿಕೊಂಡು ಅಪಪ್ರಚಾರ ನಡೆಸಲಾಗಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...