alex Certify
ಕನ್ನಡ ದುನಿಯಾ       Mobile App
       

Kannada Duniya

ವಾಚ್ ರಹಸ್ಯ ಬಿಚ್ಚಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

cm

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ಬೆಲೆಯ ವಾಚಿನ ವಿಚಾರಕ್ಕೆ ಸಿದ್ದರಾಮಯ್ಯನವರು ತೆರೆ ಎಳೆಯಲು ಮುಂದಾಗಿದ್ದು, ತಮಗೆ ವಾಚ್ ನೀಡಿದವರ ವಿವರವನ್ನು ಬಹಿರಂಗಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಾಚ್ ಅನ್ನು ತಮ್ಮ ಸ್ನೇಹಿತ ದುಬೈನಲ್ಲಿ ನೆಲೆಸಿರುವ ಕೇರಳ ಮೂಲದ ಡಾ. ಗೋಪಾಲ ಪಿಳ್ಳೈ ಗಿರೀಶ್ ಚಂದ್ರ ವರ್ಮಾ ನೀಡಿದ್ದಾಗಿ ತಿಳಿಸಿದರಲ್ಲದೇ ಕಳೆದ ಜುಲೈನಲ್ಲಿ ಭಾರತಕ್ಕೆ ಬಂದಿದ್ದ ಗಿರೀಶ್ ಚಂದ್ರ ವರ್ಮಾ ತಮ್ಮ ಕೈಯ್ಯಲ್ಲಿದ್ದ ವಾಚ್ ಅನ್ನು ಬಿಚ್ಚಿ ತಮಗೆ ನೀಡಿದ್ದಾಗಿ ಹೇಳಿದರು.

ಗಿರೀಶ್ ಚಂದ್ರ ವರ್ಮಾ, ದಾವಣಗೆರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, ಮಂಗಳೂರಿನಲ್ಲಿ ಎಂಎಸ್ ಮಾಡಿದ್ದಾರೆ. ಅವರು ತಮಗೆ 1983 ರಿಂದಲೂ ಸ್ನೇಹಿತರೆಂದು ಹೇಳಿದ ಸಿದ್ದರಾಮಯ್ಯ, ಭಾರತಕ್ಕೆ ಬಂದಾಗಲೆಲ್ಲಾ ತಮ್ಮನ್ನು ಅವರು ಭೇಟಿ ಮಾಡುತ್ತಾರೆಂದು ತಿಳಿಸಿದರು. ಈ ವಾಚ್ ಪ್ರಕರಣದ ನಂತರ ತಮ್ಮನ್ನು ಸಮಾಜವಾದದಿಂದ ಸಿದ್ದರಾಮಯ್ಯ ಮಜಾವಾದಕ್ಕೆ ತಿರುಗಿದ್ದಾರೆಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ ತಾವಾಗಲಿ ಅಥವಾ ತಮ್ಮ ಕುಟುಂಬವಾಗಲಿ ಎಂದಿಗೂ ಐಷಾರಾಮಿ ಜೀವನ ಬಯಸಿದವರಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...