alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿ.ಜೆ.ಪಿ. ನಾಯಕರಿಂದ ಮಳೆಗಾಲದಲ್ಲಿ ಬರ ಅಧ್ಯಯನ’

cm-si-karr

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ಬಿ.ಜೆ.ಪಿ ನಾಯಕರು ಬರ ಅಧ್ಯಯನಕ್ಕೆ ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಇಂದು ಮಾಧ್ಯಮ ಸಂವಾದದಲ್ಲಿ  ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಸೆಖೆಯ ಕಾರಣಕ್ಕೆ ಬರ ಅಧ್ಯಯನ ಕೈಗೊಳ್ಳದ ಬಿ.ಜೆ.ಪಿ. ಮುಖಂಡರು, ಈಗ ಛತ್ರಿ ಹಿಡಿದು ಬರ ಅಧ್ಯಯನ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ರೈತರ ಸಾಲಮನ್ನಾ ವಿಚಾರ ಮತ್ತು ಪರಿಹಾರ ಅನುದಾನ ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿಗೆ ಹೋಗುವುದನ್ನು ಬಿಟ್ಟು ಮಳೆಗಾಲದಲ್ಲಿ ಬರ ವೀಕ್ಷಣೆಗೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ನನ್ನನ್ನು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಲ್ಲ. ಕೆಲವರು ನನ್ನನ್ನು ಎ.ಐ.ಸಿ.ಸಿ. ಮುಖಂಡ ಅಹ್ಮದ್ ಪಟೇಲ್ ಅವರಿಗೆ ಪರಿಚಯಿಸಿದ್ದರು. ಅವರ ಮೂಲಕ ಸೋನಿಯಾ ಗಾಂಧಿಯರನ್ನು ಭೇಟಿ ಮಾಡಿದ್ದೆ. ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೆ ಎಂದು ಹೇಳಿದ್ದಾರೆ.

ಅನೇಕರು ನನ್ನನ್ನು ಕಾಂಗ್ರೆಸ್ ಗೆ ಸೇರಿಸಿದ್ದೆ ಎಂದೆಲ್ಲಾ ಹೇಳಿದ್ದಾರೆ. ಯಾರೂ ನನ್ನನ್ನು ಸೇರಿಸಿಲ್ಲ. ಸೋನಿಯಾ ಗಾಂಧಿಯವರ ಭೇಟಿ ಬಳಿಕ, ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದೆ. ಈ ವಿಚಾರವನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಈಗ ಹೇಳಿದ್ದೇನೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...