alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯ ಆಯ್ಕೆ ಹಿಂದಿದೆ ‘ಈ’ ಪ್ರಮುಖ ಕಾರಣ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯ್ಕೆಯಾಗಿರುವುದು ವಿಪಕ್ಷಕ್ಕಿರಲಿ ಸ್ವತಃ ಕಾಂಗ್ರೆಸ್ ನಾಯಕರನ್ನೇ ಅಚ್ಚರಿಗೀಡು ಮಾಡಿದೆ.

ಆದರೆ, ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಜಾಣ ನಡೆಯನ್ನನುಸರಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ ನಾಳೆ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಅನಿವಾರ್ಯತೆಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ, ಹಂಗಾಮಿ ಸ್ಪೀಕರ್ ರನ್ನಾಗಿ ಕೆ.ಜಿ. ಬೋಪಯ್ಯನವರನ್ನು ಆಯ್ಕೆ ಮಾಡಿದ್ದೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಲು ಕಾರಣವೆನ್ನಲಾಗಿದೆ.

ಕಾನೂನು ಪಂಡಿತರಾಗಿರುವ ಕೆ.ಜಿ. ಬೋಪಯ್ಯನವರ ನಿರ್ಧಾರಗಳನ್ನು ಪ್ರಶ್ನಿಸಲು ಕಾನೂನು ಪಂಡಿತರಷ್ಟೇ ಅಲ್ಲ ರಾಜಕಾರಣದಲ್ಲೂ ಅನುಭವಿಯಾಗಿರುವ ಸಿದ್ದರಾಮಯ್ಯ ಸಮರ್ಥರೆಂಬ ಕಾರಣಕ್ಕೆ ಈ ಆಯ್ಕೆ ನಡೆದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...